ಜಿಲ್ಲಾಡಳಿತದ ಸಂಧಾನ ಯಶಸ್ವಿ: ಬೀದರ್ ಬಂದ್ ಕರೆ ತಾತ್ಕಾಲಿಕ ಮುಂದೂಡಿಕೆ

ಕಲಬುರಗಿ,ಜ.4:ಬೀದರ್ ಜಿಲ್ಲಾಡಳಿತವು ಕೈಗೊಂಡ ಸಂಧಾನದಿಂದ ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಮತ್ತು ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಜಂಟಿಯಾಗಿ ಜನವರಿ 5ರಂದು ಕರೆ ನೀಡಿದ್ದ ಬೀದರ್ ಬಂದ್ ತಾತ್ಕಾಲಿಕವಾಗಿ ಮುಂಡೂಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೋಚಕನಳ್ಳಿ ಅವರು ತಿಳಿಸಿದ್ದಾರೆ.
ಬಂದ್ ಕರೆಗೆ ಎಚ್ಚೆತ್ತ ಜಿಲ್ಲಾಡಳಿತ ಕಳೆದ ಎರಡು ದಿನಗಳಿಂದ ರೈತರ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬಂದ್ ಕರೆಯನ್ನ ಹಿಂತೆಗೆದುಕೊಳ್ಳಲು ಆಗ್ರಹಿಸಿದರು. ಹೋರಾಟದ ಮುಖಂಡರು ಪರಸ್ಪರ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಹಾಗೂ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಿ. ಕಿಶೋರ್ ಬಾಬು ಅವರು ಸಂತ್ರಸ್ತರ ಸತ್ಯಾಗ್ರಹದ ಸ್ಥಳಕ್ಕೆ ಬಂದು ಬಂದ್ ಕರೆ ಕೈಬಿಡಬೇಕು ಎನ್ನುವ ಅವರ ವಿನಂತಿಗೆ ಮನ್ನಿಸಿ, ಹೋರಾಟದ ಮುಂದಾಳತ್ವ ವಹಿಸಿದ್ದ ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ ಅವರು ಎಲ್ಲರ ಪರವಾಗಿ ಬಂದ್ ಕರೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.
ಅದೇ ದಿನ ಅಂದರೆ ಜನವರಿ 5ರಂದು ಎಲ್ಲ 28 ಹಳ್ಳಿಯ ಸಂತ್ರಸ್ತರು, ಸಂಘ ಸಂಸ್ಥಗಳೊಡನೆ ಸೇರಿ ಒಂದು ಬೃಹತ್ ವಾಹನಗಳ ಜಾಥಾ ಆಯೋಜಿಸಲು ನಿರ್ಧಾರ ತೆಗೆದುಕೊಂಡರು.
ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಮುಖಂಡ ಲಕ್ಷ್ಮಣ್ ದಸ್ತಿಅವರ ಮುಂದಾಳತ್ವದಲ್ಲಿ ಹೋರಾಟದ ಸ್ವರೂಪ ಬದಲಾಗಿದೆ. ಇದೆ ಜನವರಿ 5ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ 28 ಗ್ರಾಮಗಳ ಸಂತ್ರಸ್ತರು ತಮ್ಮ ತಮ್ಮ ವಾಹನಗಳ ಜೊತೆ ನಗರದ ನೆಹರೂ ಕ್ರೀಡಾಂಗಣದ ಹತ್ತಿರ ಇರುವ ಸಾಯಿ ಸ್ಕೂಲ್ ಮೈದಾನದಿಂದ ನಗರ ಕನ್ನಡಾಂಬೆ – ರೋಟರಿ ವೃತ್ತ, ಮಡಿವಾಳ್ ಸರ್ಕಲ್, ಹೊಸ ಬಸ್ ನಿಲ್ದಾಣ, ಶಿವನಗರ ಟ್ರಾಫಿಕ್ ಸಿಗ್ನಲ್, ಪಾಮ್ರೋಡ್, ರೈಲ್ವೆ ಅಂಡರ್ಪಾಸ್, ನ್ಯೂ ಆದರ್ಶ ಕಾಲೊನಿ, ಚಿದ್ರಿ ರಿಂಗ್ ರೋಡ್, ಮೈಲೂರು, ಗುಂಪಾ ರಸ್ತೆ, ಭೂಮರೆಡ್ಡಿ ಕಾಲೇಜ್, ಮೈಲೂರ್ ಕ್ರಾಸ್, ಬೊಮ್ಮಗೊಂಡೇಶ್ವರ್ ವೃತ್ತ, ಬಸವೇಶ್ವರ್ ವೃತ್ತ, ನಯಾ ಕಮಾನ್, ಚೌಬಾರ್, ಗವಾನ್ ವೃತ್ತ, ಉಸ್ಮಾನ್ ಗಂಜ್, ಶಾಹಗಂಜ್ ವೃತ್ತದಿಂದ ಅಂಬೇಡ್ಕರ್ ವೃತ್ತದಲ್ಲಿ ಕೆಲ ಕ್ಷಣ ವಾಹನಗಳ ಸರಪಳಿ ನಡೆಸಿ ನಂತರ ಶಿವಾಜಿ ವೃತ್ತದ ಬಳಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಚಂದ್ರಶೇಖರ್ ಪಾಟೀಲ್ ಹೋಚಕನಳ್ಳಿ ಅವರು ತಿಳಿಸಿದ್ದಾರೆ.
ಎಲ್ಲ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡಲು ಎಲ್ಲ ಸಂಘ ಸಂಸ್ಥೆಗಳು ಪಣತೊಟ್ಟಿದ್ದು, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿಇನ್ನೂ ತೀವ್ರತರವಾದ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ವಾಹನಗಳ ಜಾಥಾಕ್ಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಮಸ್ತ ಜನತೆ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಲು ಅವರು ಕೋರಿದ್ದಾರೆ. ಸಭೆಯಲ್ಲಿ 28 ಗ್ರಾಮಗಳ ಪ್ರತಿನಿಧಿಗಳ ಜೊತೆ ದಯಾನಂದ್ ಸ್ವಾಮಿ, ವಿನಯ್ ಮಾಳಗೆ, ಅನಂತ್ ರೆಡ್ಡಿ, ರೋಹನ್ ಕುಮಾರ್, ಸೋಮನಾಥ್ ಮುದೊಳ್ಕರ್, ಶಿವಕುಮಾರ್ ತುಂಗಾ, ಮಹೇಶ್ ಗೋರ್ನಾಳಕರ್, ಹಣ್ಮುಪಾಜಿ, ಅಭಿμÉೀಕ್ ಮಠಪತಿ, ಅನಿಲ್ ಜಾಧವ್, ಸಿದ್ದಪ್ಪ ದಾಕುಳಗಿ ಮುಂತಾದವರು ಪಾಲ್ಗೊಂಡಿದ್ದರು.