ಜಿಲ್ಲಾಡಳಿತದ ವಿರುದ್ಧ ಅಪಪ್ರಚಾರ ಮಾಡುವುದು ಅಪರಾಧ: ಜಗದೀಶ್

ಉಡುಪಿ, ಮಾ.೩೧- ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಇದು ಸರಿಯಲ್ಲ. ಅವರು ಯಾವುದಕ್ಕೂ ಅರ್ಹರಾದವರಲ್ಲ. ಜಿಲ್ಲೆಯ ಬಗ್ಗೆ ಅಪಪ್ರಚಾರ ಮಾಡಿರುವುದು ಅಪರಾಧ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ಮಂಗಳವಾರ ಅಜ್ಜರಕಾಡು ಕ್ರೀಡಾಂಗಣದಲ್ಲಿ ಮಾಧ್ಯಮ ದವರನ್ನುದ್ದೇಶಿಸಿ ಮಾತನಾಡಿ, ’ಅವರು ನಗರದ ಅಜ್ಜರಕಾಡು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭೂ ಸೇನಾ ನೇಮಕಾತಿ ರ್ಯಾಲಿಯ ಬಗ್ಗೆ ಮಾತನಾಡುತ್ತಾ, ನೇಮಕಾತಿಗೆ ಬಂದ ಅಭ್ಯರ್ಥಿಗಳು, ರಾತ್ರಿ ೨ ಗಂಟೆಗೆ ಬರುವವರು ಪರೀಕ್ಷೆ ಬೇಗನೆ ಹಾಜರಾಗಬೇಕು ಎನ್ನುವ ನಿಟ್ಟಿನಲ್ಲಿ ರಸ್ತೆಯಲ್ಲಿ ನಿದ್ದೆ ಮಾಡುತ್ತಿದ್ದರು. ಅಂತಹವರ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಸರಿಯಲ್ಲ. ೬ ಕಡೆಗಳಲ್ಲಿ ವಸತಿ ಹಾಗೂ ದಾನಿಗಳ ನೆರವಿನಿಂದ ಊಟ ಹಾಗೂ ಉಪಹಾರವನ್ನು ಶಿಬಿರಾರ್ಥಿಗಳಿಗೆ ಉಚಿತವಾಗಿ ನೀಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸೇನಾ ನೇಮಕಾತಿ ಮಾಡುವುದಾದರೆ ಎಲ್ಲಿ ಹೆಚ್ಚು ಮಂದಿ ಒಂದೇ ಜಿಲ್ಲೆಯಿಂದ ಭಾಗವಹಿಸುತ್ತಾರೋ ಅಲ್ಲೇ ನಡೆಸುವುದು ಉತ್ತಮ ಎಂಬ ಸಲಹೆಯನ್ನು ಸೇನಾ ನೇಮಕಾತಿ ಇಲಾಖೆಗೆ ನೀಡಿದ್ದಾರೆ. ಕರಾವಳಿ ಯುವ ಜನತೆ ಸ್ಪೂರ್ತಿ ಗೊಂಡು ಇನ್ನಷ್ಟು ಹೆಚ್ಚು ಮಂದಿ ಸೇನೆಗೆ ಸೇರಲಿ ಎಂಬ ಉದ್ದೇಶದಿಂದ ಉಡುಪಿಯಲ್ಲಿ ಆಯೋಜಿಸಲಾಗಿತ್ತು, ಎಂದರು. ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಿಂದ ಮೊದಲ ದಿನ ೨,೦೦೦ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು, ವೈದ್ಯಕೀಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ರ್ಯಾಲಿಗೆ ಜಿಲ್ಲಾಡಳಿತದ ಮೂಲಕ ಅಗತ್ಯವಿರುವ ಸಹಕಾರ ನೀಡಲಾಗಿದೆ. ಮುಂದಿನ ದಿನದಲ್ಲಿ ಹೆಚ್ಚು ಅರ್ಜಿಗಳು ಬಂದಿರುವ ಜಿಲ್ಲೆಯಲ್ಲಿಯೇ ನೇಮಕಾತಿ ನಡೆಸುವಂತೆ ಸಲಹೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ ಹೇಳಿದರು. ನಗರದ ಅಜ್ಜರಕಾಡು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭೂ ಸೇನಾ ನೇಮಕಾತಿ ರ್ಯಾಲಿಯಲ್ಲಿ ರಾಜ್ಯದಿಂದ ಒಟ್ಟು ೩೮,೮೧೮ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇಮಕಾತಿ ಅರ್ಜಿಯನ್ನು ಸಲ್ಲಿಸಿದ್ದು, ಅದರಲ್ಲಿ ೨೩೦೦೦ ಮಂದಿ ನೇಮಕಾತಿಯಲ್ಲಿ ಭಾಗವಹಿಸಿದ್ದು, ೨೨,೫೩೨ ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ೧೬,೨೮೬ ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯದ ಪರೀಕ್ಷೆಗೆ ಗೈರಾಗಿದ್ದಾರೆ. ಅಭ್ಯರ್ಥೀಗಳ ದೈಹಿಕ ಪರೀಕ್ಷೆ ಮಾರ್ಚ್ ೨೯ರಂದು ಅಂತಿಮ ಗೊಂಡಿದೆ. ಕೆಲವು ಅಭ್ಯರ್ಥೀಗಳ ವರದಿ ಪರೀಶೀಲನೆಗೆ ಮಂಗಳೂರಿನ ಆಸ್ಪತ್ರೆ ಕಳುಹಿಸಲಾಗಿದೆ. ಇದೇ ಬರುವ ಮೇ ತಿಂಗಳಲ್ಲಿ ನಡೆಸಲಾಗುವುದು ಎಂದು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ದುಭಾಶ್ ತಿಳಿಸಿದರು.