ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ

ರಾಯಚೂರು,ಏ.೨೭- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಗೀರಥ ಮಹರ್ಷಿ ಜಯಂತಿಯನ್ನು ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಏ.೨೭ರ(ಗುರುವಾರ) ನಗರದ ಕನ್ನಡ ಭವನದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಿಬ್ಬಂದಿಗಳಾದ ರಮೇಶ, ಇಸ್ಮಾಯಿಲ್, ಶ್ರೀದೇವಿ, ಸಿದ್ದು, ವಿನೋದಕುಮಾರ, ದಂಡಪ್ಪ ಬಿರಾದಾರ, ಉಪ್ಪಾರ ಸಮಾಜದ ಮುಖಂಡರಾದ ಮಿರ್ಜಾಪೂರ ಪಾಗುಂಟಪ್ಪ, ಎಮ್. ಚಂದ್ರಶೇಖರ, ದೇವನಪಲ್ಲಿ ಬುಗ್ಗಾರೆಡ್ಡಿ, ಆದೋನಿ ಆದಿರಾಜ, ಪಿ.ಸುರೇಖಾ, ರೇಣುಕಾ ಬಾಲ್ಕಿ, ಜುಕೂರು ಶ್ರೀನಿವಾಸ ಸಾಗರ, ಆರ್.ಶ್ರೀನಿವಾಸ, ಪಿ.ಸಿದ್ದಲಿಂಗ, ಗಟ್ಟು ಶ್ರೀನಿವಾಸ, ನವಲಕಲ್ ಶ್ರೀನಿವಾಸ, ದೇವೆಂದ್ರಪ್ಪ, ಸಂತೋಷ ಸಾಗರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.