ಜಿಲ್ಲಾಡಳಿತಕ್ಕೆ ರೆಡ್‍ಕ್ರಾಸ್ ಸಂಸ್ಥೆಯಿಂದ 50 ಆಕ್ಸಿಮೀಟರ ಹಸ್ತಾಂತರ

ಧಾರವಾಡ ಜೂ.2: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕ ಅಮೇರಿಕದ ಐಎನ್‍ಆರ್ ಸಹಕಾರದ ವತಿಯಿಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ 50 ಆಕ್ಸಿಮೀಟರಗಳನ್ನು ನೀಡಲಾಯಿತು.
ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಕೋವಿಡ್ ಸಮಯದಲ್ಲಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಕಾರ್ಯಮಾಡುತ್ತಿರುವುದು ಶ್ಲಾಘನೀಯ. ಈ ಐವತ್ತು ಆಕ್ಸಿಮೀಟರಗಳನ್ನು ಜಿಲ್ಲೆಯ ಐವತ್ತು ಕೋವಿಡ್ ಕೇರ್ ಸೆಂಟರ್ ಗಳಿಗೆ ನೀಡಿ ಅಲ್ಲಿನ ವೈದ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ, ಮಕ್ಕಳತಜ್ಞರಾದ ಡಾ.ಕವನ ದೇಶಪಾಂಡೆ ಮಾತನಾಡಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಯೋಜನೆ ರೂಪಿಸಿಕೊಂಡು ಜನಸಾಮಾನ್ಯರ ಆರೋಗ್ಯದ ರಕ್ಷಣೆಗೆ ಕಾರ್ಯಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ತಭಂಡಾರದ ಡಾ.ಉಮೇಶ ಹಳ್ಳಿಕೇರಿ, ರೆಡ್ ಕ್ರಾಸ್ ಸದಸ್ಯರಾದ ಡಾ.ಧೀರಜ ವೀರನಗೌಡರ, ಮಾರ್ತಾಂಡಪ್ಪ ಎಮ್ ಕತ್ತಿ, ಇಂಜಿನಿಯರ್ ಸುನೀಲ ಬಾಗೇವಾಡಿ, ರಾಜಶೇಖರಗೌಡ ಕಂಟೆಪ್ಪಗೌಡರ,ದಯಾನಂದ ಸಾದನಿ, ಇದ್ದರು.