
ಸಿಂಗಾಪೂರ್, ಮಾ.೧೧- ಜೀವವೈವಿಧ್ಯತೆಯ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೊಸ ಜೀವದ ಅನ್ವೇಷಣೆ ನಡೆಯುತ್ತಿದ್ದು, ಇದೀಗ ಸಿಂಗಾಪೂರ್‌ನಲ್ಲಿ ಹೊಸ ಪ್ರಬೇಧದ ಜಿರಳೆಯನ್ನು ಪತ್ತೆಹಚ್ಚಲಾಗಿದೆ. ಅಚ್ಚರಿಯ ರೀತಿ ಎಂಬಂತೆ ಈ ಜಿರಳೆಗೆ ಪ್ರಸಿದ್ಧ ಪೊಕೆಮನ್ ಸರಣಿಯಲ್ಲಿ ಕಾಣಿಸಿಕೊಳ್ಳುವ ?ಫೆರಮೊಸಾ?ದ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಪೊಕೆಮನ್ ಕಾರ್ಟೂನ್ ಸರಣಿಯ ಏಳನೇ ಅವರಣಿಕೆಯಲ್ಲಿ ಈ ಫೆರಮೋಸಾದ ಪಾತ್ರ ಕಾಣಿಸಿಕೊಂಡಿದ್ದು, ಸದ್ಯ ಇದನ್ನೇ ಹೋಲುವ ಹೊಸ ಜಿರಳೆಯ ಪ್ರಬೇಧ ಸಿಂಗಾಪೂರ್‌ನಲ್ಲಿ ಪತ್ತೆಹಚ್ಚಲಾಗಿದೆ. ಹಾಗಾಗಿ ಫೆರಮೋಸಾದ ಹೆಸರನ್ನೇ ಈ ನೂತನ ಪ್ರಬೇಧದ ಜಿರಳೆಗೆ ಇಡಲಾಗಿದೆ. ಸಿಂಗಾಪೂರ್‌ನ ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ನೊಕ್ಟಿಕೋಲಿಡೆ (ಜಿರಳೆಯ ಪ್ರಬೇಧ) ಕುಟುಂಬದಲ್ಲಿ ಕೇವಲ ೩೨ ಜಾತಿಗಳಿವೆ. ಸದ್ಯ ಇದು ಸಿಂಗಾಪೂರ್‌ನಲ್ಲಿ ಮೊದಲು ದಾಖಲಿಸಲ್ಪಟ್ಟ ಈ ದುರ್ಬಲವಾದ ಜಿರಳೆಗಳನ್ನು ಒಳಗೊಂಡಿದೆ. ಸಿಂಗಾಪುರದಲ್ಲಿ ವಿವಿಧ ಜಾತಿಯ ಕೀಟಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೈಸರ್ಗಿಕ ಮೀಸಲು ಪ್ರದೇಶದಲ್ಲಿ ನಡೆಸಲಾಗುತ್ತಿರುವ ಕೀಟ ಸಮೀಕ್ಷೆಯ ಸಮಯದಲ್ಲಿ ಜಿರಳೆ ಜಾತಿಯನ್ನು ೨೦೧೬ ರಲ್ಲಿ ಕಂಡುಹಿಡಿಯಲಾಗಿತ್ತು. ಆದರೆ ಜಾತಿಯ ಹೊರಭಾಗವು ಗುರುತಿಸಲ್ಪಟ್ಟಿರುವ ಜಾತಿಗೆ ಹೊಂದಿಕೆಯಾಗಿದ್ದರೂ, ವಿಭಜನೆಯ ಸಮಯದಲ್ಲಿ ಅದು ಹಿಂದೆಂದೂ ಕಂಡುಹಿಡಿಯದ ಹೊಸ ಜಾತಿ ಎಂದು ಇದೀಗ ಕಂಡುಬಂದಿದೆ. ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಫೂ ಮಾಶೆಂಗ್ ಮತ್ತು ಯುಪಿಎಲ್ಬಿ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಕ್ರಿಸ್ಟಿಯನ್ ಲುಕಾನಾಸ್ ಅವರು ಇತ್ತೀಚೆಗೆ ತಮ್ಮ ಆವಿಷ್ಕಾರದ ಆಧಾರದ ಮೇಲೆ ಸಮಗ್ರ ವರದಿಯನ್ನು ಪ್ರಕಟಿಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಮಾವೊಶೆಂಗ್ ಟ್ವಿಟರ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.