ಜಿಮ್ ಗೆ ಬೀಗ; ಜೆಡಿಎಸ್ ಯುವ ಮುಖಂಡರ ಪ್ರತಿಭಟನೆ

ದಾವಣಗೆರೆ.ಡಿ.೨೭; : ಸಾರ್ವಜನಿಕರ ಉಪಯೋಗಕ್ಕಿದ್ದ ಜಿಮ್ ಗೆ ಬೀಗ ಹಾಕಿರುವುದನ್ನ ಖಂಡಿಸಿ ಜೆಡಿಎಸ್ ಯುವ ಮುಖಂಡ ಶ್ರೀಧರ್ ಪಾಟೀಲ್ ಪ್ರತಿಭಟನೆ ನಡೆಸಿದರು. ದಾವಣಗೆರೆ ಆಂಜನೇಯ ಬಡಾವಣೆಯ 13 ಕ್ರಾಸ್ ಲ್ಲಿ ಕಳೆದ 10 ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಜಿಮ್ ಆರಂಭಿಸಿತ್ತು. ಸ್ಥಳೀಯರು ಜಿಮ್ ನ ಉಪಯೋಗ ಪಡೆದುಕೊಳ್ಳುತ್ತಿದ್ದರು. ಈ ಜಿಮ್ ಗೆ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ ಹಾಗೂ ಮೊಮ್ಮಗ ಬೀಗ ಹಾಕಿ ಸಾರ್ವಜನಿಕರ ಬರದಂತೆ ನಿರ್ಬಂಧ ಹಾಕಿದ್ದಾರೆ. ಸ್ಥಳೀಯರು ಉಚಿತವಾಗಿ ವ್ಯಾಯಾಮ ಅಭ್ಯಾಸ ಮಾಡುತ್ತಿದ್ದರು. ಇದೀಗ ಅಭ್ಯಾಸಕ್ಕೆ ಬರುವಂತವರು ಹಣ ನೀಡಬೇಕೆಂದು ಶಾಸಕರ ಪುತ್ರಿ ಒತ್ತಾಯಿಸಿದ್ದಾರೆ ಎಂಬುದು ಸ್ಥಳೀಯರ ಆರೋಪ. ಇದನ್ನ ಖಂಡಿಸಿ ಜೆಡಿಎಸ್ ಯುವ ಮುಖಂಡರಾದ ಶ್ರೀಧರ್ ಪಾಟೀಲ್ ಜಿಮ್ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು