ಜಿಮ್‌ ಬಂದ್ ತೆರವು; ‌ ಶೇ.50ರ ಸಾಮರ್ಥ್ಯಕ್ಕೆ‌ಅವಕಾಶ

ಬೆಂಗಳೂರು,ಏ.4- ರಾಜ್ಯದಲ್ಲಿ ಕೊರೋನಾ ಸೋಂಕು ನಿತ್ಯ‌‌ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಮ್ ಮತ್ತು ಈಜುಕೊಳ ಬಂದ್ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಇದೀಗ ಜಿಮ್ ಮೇಲಿನ ಬಂದ್ ತೆರವು ಮಾಡಿ ಶೇ.50ಕ್ಕೆ ಅವಕಾಶ ಮಾಡಿಕೊಟ್ಟಿದೆ.

ಜಿಮ್ ಗಳಲ್ಲಿ ಶೇಕಡ 50ರಷ್ಟು ಸಾಮರ್ಥ್ಯ ಮೀರದಂತೆ ಎಚ್ಚರಿಕೆ ವಹಿಸಬೇಕು ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರಕ್ಕೆ ಒತ್ತು ನೀಡುವಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

ಜಿಮ್ ಗಳಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಜಿಮ್ ಗಳನ್ನು ಮುಚ್ಚಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಆದೇಶದಲ್ಲಿ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಜಿಮ್ ಗಳನ್ನು ಬಂದ್ ಮಾಡಿರುವ ಸರ್ಕಾರದ ಕ್ರಮಕ್ಕೆ ಜಿಮ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿ ಜಿಮ್ ಗೆ ಅವಕಾಶ ಮಾಡಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ನಿನಗೆ ಎಷ್ಟು ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಸಾಮರ್ಥ್ಯವನ್ನು ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿತು ಇದೀಗ ಜಿಮ್ ಗಳ ಮೇಲಿನ ಆದೇಶವನ್ನು ತೆರವು ಮಾಡಿ ಶೇ. 50 ಕ್ಕೆ ಅವಕಾಶ ಮಾಡಿಕೊಟ್ಟಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸುವ ಯಾವುದೇ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಬೆಳಗ್ಗೆ ಆದೇಶ ಹೊರಡಿಸಿ ಸಂಜೆಯ ಅಥವಾ ಮರುದಿನವೇ ಮಾರ್ಪಡಿಸುವ ಪರಿಪಾಠ ನಿರಂತರವಾಗಿ ನಡೆಯುತ್ತಿದೆ