ಜಿಮ್ಸ್ ಭದ್ರತಾ ಸೇವೆ:5 ವರ್ಷದಲ್ಲಿ 42.38 ಕೋಟಿ ಟೆಂಡರ್

ಕಲಬುರಗಿ,ಫೆ 21: ಗುಲಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ( ಜಿಮ್ಸ್ )ಯಲ್ಲಿ ಕಳೆದ 5 ವರ್ಷಗಳಿಂದ ಭದ್ರತಾಸೇವೆ ಒದಗಿಸಲು 42.38 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಸದನದಲ್ಲಿ ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
2019 -21 ರವರೆಗೆ ಮೈಸೂರಿನ ಶಾರ್ಪ ವಾಚ್ ಇನ್‍ವೆಸ್ಟಿಗೇಷನ್ ಅಂಡ್ ಸೆಕ್ಯೂರಿಟಿ ಮತ್ತು 2021 ರಿಂದ 2023-24 ರವರೆಗೆ ಧಾರವಾಡದ ಈಗಲ್ ಡಿಟೆಕ್ಟಿವ್ ಫೋರ್ಸ್ ಎಂಬ ಎರಡು ಸಂಸ್ಥೆಗಳು ಟೆಂಡರ್ ಮೂಲಕ ಭದ್ರತಾ ಸೇವೆ ಒದಗಿಸಿವೆ ಎಂದರು.