ಜಿಮ್ಸ್ ನಲ್ಲಿ ವಿಶ್ವ ಯೋಗ ದಿನಾಚರಣೆ:ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಸಾಧ್ಯ

ಕಲಬುರಗಿ,ಜೂ.21: ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾಮಸಿಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು.
ಬುಧವಾರ 9ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಮ್ಸ್ ಸಂಸ್ಥೆಯ ಶರೀಯ ಕ್ರಿಯಾ ಶಾಸ್ತ್ರ ವಿಭಾಗವು ಅಯೋಜಿಸಿದ ಯೋಗ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಹುಟ್ಟಿಕೊಂಡ ಯೋಗವು ಇಂದು ಪ್ರಪಂಚದಾದ್ಯಂತ ಪ್ರಚಲಿತವಾಗಿದ್ದು, ಎಲ್ಲೆಡೆ ಇದನ್ನು ಅನುಸರಿಸಲಾಗುತ್ತಿದೆ. ಯೋಗ ಮಾನಸಿಕ, ದೈಹಿಕ, ಸಾಂಸ್ಕøತಿಕ ಹಾಗೂ ಆಧ್ಯಾತ್ಮಿಕ ಆಭ್ಯಾಸವಾಗಬೇಕಿದೆ ಎಂದರು.
ಜಿಮ್ಸ್ ಶರೀರಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ ಕರ್ಪೂರ ಅವರು ವಿವಿಧ ಆಸನಗಳ ಲಾಭದ ಬಗ್ಗೆ ವಿವರಿಸಿದರು. ರಾಚಣ್ಣಾ ಮತ್ತು ಸುಪ್ರಿಯಾ ಅವರು ಯೋಗಾಭ್ಯಾಸ ಹೇಳಿಕೊಟ್ಟರು.
ಯೋಗಾಭ್ಯಾಸದಲ್ಲಿ ಸಂಸ್ಥೆಯ ಪ್ರಾಧ್ಯಾಪಕ ವೃಂದ, ವೈದ್ಯಾಧಿಕಾರಿಗಳು ಸೇರಿದಂತೆ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.