ಜಿಮ್ನಾಸ್ಟಿಕ್ ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪ್ರಧಾನ

ವಿಜಯಪುರ, ಮಾ.14-ನಗರದ ಖಾಸಗಿ ಹೊಟೇಲ್‍ನಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಭಾಗವಹಿಸಿ ಜಯಗಳಿಸಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್.ಎಂ.ಪಾಟೀಲ್ (ಗಣಿಯಾರ) ರವರು ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ. ಸರ್ಕಾರ ಕ್ರೀಡಾಪಟುಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿ ಸಹಾಯ-ಸಹಕಾರ ಮಾಡಬೇಕಾಗಿದೆ. ಇಂದು ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ಕ್ರೀಡಾಪಟುಗಳಿಗೆ ಗೌರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ. ಅಶೋಕ ಜಾಧವರವರು ಮಾಥನಾಡಿ, ಕ್ರೀಡೆಯಲ್ಲಿ ಶ್ರದ್ಧೆ, ಶ್ರಮ, ಪ್ರಯತ್ನ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಕೇವಲ ಹೆಸರಿಗಾಗಿ ಕ್ರೀಡಾಪಟುಗಳು ಆಗಿರುವುದು ಸೂಕ್ತವಲ್ಲ ಕ್ರೀಡಾಪಟುಗಳು ದೃಢನಿರ್ಧಾರ ಹಾಗೂ ಇಚ್ಛಾಶಕ್ತಿ ಹೊಂದಿದ್ದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವುದು ಶತ ಸಿದ್ಧವಾದ ಮಾತು ಎಂದು ಹೇಳಿದರು.
ಜಿಮ್ನಾಸ್ಟಿಕ್ ಅಶೋಸಿಯೇಶನ್ ಜಿಲ್ಲಾಧ್ಯಕ್ಷ ಫಯಾಜ ಕಲಾದಗಿ ಮಾತನಾಡಿ, ಜಿಲ್ಲೆಯ ಎಲ್ಲ ಕ್ರೀಡಾಪಟುಗಳಿಗೆ ಜಾತ್ಯಾತಿತವಾಗಿ, ಬಡವರಿಗೆ ಸಹಾಯ ಸಹಕಾರ ನೀಡುವದರೊಂದಿಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನಾವು ನೀಡುತ್ತಾ ಬಂದಿದ್ದೇವೆ. ಜಯಗೊಳಿಸಿದ 30 ಕ್ರೀಡಾ ಪಟುಗಳಿಗೆ ಪ್ರಶಸ್ತಿ ನೀಡಿಗೌರವಿಸಲಾಯಿತು.
ವೇದಿಕೆ ಮೇಲೆ ಯುವ ನಾಯಕರಾದ ವಿನೋದ ವ್ಯಾಸ, ಯಾಕೂಬ ಜತ್ತಿ, ಹೆಚ್.ಎಸ್. ಕಬಾಡೆ, ನಸೀಮ ರೋಜಿದಾರ, ಐ.ಸಿ. ಪಠಾಣ, ಎ.ಎ. ಜಹಗೀರದಾರ, ಲತೀಪ ಕಲಾದಗಿ, ದಾದಾಫೀರ ಮುಜಾವರ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಾನಂದ ದುದ್ದಗಿ, ಡಿ.ಎಸ್.ಪೀರಜಾದೆ, ಬಸವರಾಜ ಬಿ.ಕೆ., ಎಸ್.ಬಿ.ಕೂಡಗಿ, ಸಂತೋಷ ಮುದೋಳ, ಹಸನ ಕಲಾದಗಿ, ಇರ್ಫಾನ್ ಜಾಗೀರದಾರ, ಶಂಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು