ಜಿಪ್ ಲೈನ್ ಮೂಲಕ ಮತದಾರರ ಜಾಗೃತಿ

ದಾವಣಗೆರೆ. ಮೇ.೨;    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮತದಾರರು ಮತಗಟ್ಟೆಯ ಕಡೆಗೆ ಜಾಗೃತಿ ಮೂಡಿಸುವ ಸಲುವಾಗಿ,”ನಮ್ಮ ನಡೆ ಮತಗಟ್ಟೆ ಕಡೆ” ಎನ್ನುವ ಅಭಿಯಾನವನ್ನು ವಿಶೇಷವಾಗಿ ಸಾಹಸ ಕ್ರೀಡೆಯಾದ ಜಿಪ್ ಲೈನ್ ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.  ದಾವಣಗೆರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಸುಮಾರು 35 ಅಡಿ ಎತ್ತರದಿಂದ 50 ಮೀಟರ್ ಉದ್ದದ ಜಿಪ್ ಲೈನ್ ಅನ್ನು ಮಾಡಿಸುವುದರ ಮೂಲಕ ಮತದಾನ ಜಾಗೃತಿಯನ್ನು ವಿಶೇಷವಾಗಿ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಜಿಪ್ ಲೈನ್ ಮಾಡಿದ್ದು ಮತದಾರರ ಜಾಗೃತಿಗೆ ವಿಶೇಷ ಆಕರ್ಷಣೆಯಾಗಿತ್ತು. ಈ ಸಾಹಸ ಕ್ರೀಡೆಯನ್ನು ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ನಡೆಸಿ ಕೊಟ್ಟಿದ್ದು ಸುಮಾರು100 ಕೂ ಹೆಚ್ಚಿನ ಯುವಕ, ಯುವತಿಯರು, ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಸುರೇಶ್ ಇಟ್ನಾಳ್. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯ್ಕ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ಎಂ ನೆಲವಿಗಿ.  ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಕಾರ್ಯದರ್ಶಿ  ಹಾಗೂ ಸಾಹಸ ಕ್ರೀಡಾ ತರಬೇತುದಾರ ಎನ್. ಕೆ ಕೊಟ್ರೇಶ್. ಸಹಾಯಕ ತರಬೇತುದಾರರಾದ ಶಶಿಕುಮಾರ್.  ನಾಗರಾಜ್. ಬಸವರಾಜ್. ದೀಪಕ್. ಸಂಗಮೇಶ್. ಮಾಲತೇಶ್. ಹರ್ಷ ಇನ್ನು ಮುಂತಾದವರು ಉಪಸ್ಥಿತರಿದ್ದರು.