ಜಿಪಂ ತಾಪಂ ಚುನಾವಣೆ ವಿಳಂಬಕ್ಕೇ ಬಿಜೆಪಿ ಸರ್ಕಾರ ಕಾರಣ : ಆರೋಪ


ಸಂಜೆವಾಣಿ ವಾರ್ತೆ
ಕುಕನೂರು, ನ.15:  ಜಿಪಂ ,ತಾಪಂ ಚುನಾವಣೆ ತಡವಾಗಲು ಈ ಹಿಂದೆ ಇದ್ದ ರಾಜ್ಯ ಸರ್ಕಾರವೇ ಕಾರಣ ಎಂದು  ಜಿಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಈರಪ್ಪ ಕುಡಗುಂಟಿ ಹೇಳಿದರು,
ಅವರು  ಮಾಧ್ಯಮದೊಂದಿಗೆ ಮಾತನಾಡಿ, ಪ್ರಸ್ತುತ ಜಿಲ್ಲಾ ಪಂಚಾಯತ್ ,ತಾಲೂಕ್ ಪಂಚಾಯಿತಿ ಚುನಾವಣೆಗೆ ಹಿಂದೇಟು ಹಾಕುತ್ತಿರುವುದು ಈ ಹಿಂದೆ ಆಡಳಿತ ಮಾಡಿದ ಬಿಜೆಪಿ ಸರ್ಕಾರವೇ ಕಾರಣ .ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತಿ ಅಧಿಕಾರ ಸದಸ್ಯರ ಆಡಳಿತ ಮುಗಿದು ಡಿಸೆಂಬರ್ ಗೆ ನಾಲ್ಕು ವರ್ಷ ಗತಿಸುತ್ತವೆ  ಆದರೆ ಬಿಜೆಪಿ ಸರ್ಕಾರ ಅಂದು ಮಾಡಿದ ಎಡವಟ್ಟಿಗೆ ಜನರು ಇಂದು  ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ರೀತಿಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಾಲಾ ಕಟ್ಟಡ ವಿವಿಧ ಗ್ರಾಮೀಣ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಹೀಗಾಗಿ ಜನರು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದರೆ ಅಧಿಕಾರಿಗಳ ಬಳಿ ಹೋಗುವಂತಾಗಿದೆ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಗಾಗಿ ಅಭಿರುದ್ದಿಯ ಕಾರ್ಯಗಳು ನೆಲಗುದ್ದಿಗೆ ಬಿದ್ದಿದೆ ಕೇವಲ ಸಂಸದರು ಶಾಸಕರು ಮಾಡಬೇಕಾದರೆ ಕಷ್ಟದ ಕೆಲಸವಾಗಿದೆ ಜನರ ತೊರಿತ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಕೇವಲ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಆಗಬೇಕೆಂದರೆ ಇಲ್ಲೇನು ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ಪ್ರಶ್ನಿಸಿದರು ಒಟ್ಟಿನಲ್ಲಿ ನಲ್ಲಿ ಲೋಕಸಭಾ ಚುನಾವಣೆ ಯಾದ ನಂತರ ನಡೆಯುವ ಸಾಧ್ಯತೆಗಳು ಕಂಡುಬರುತ್ತವೆ ಎಂದು ವಿಷಾದದಿಂದ  ಹೇಳಿದರು