ಜಿಪಂ ಕ್ಷೇತ್ರ ವಿಂಗಡಣೆಗೆ ಭಾರಿ ವಿರೋಧ ಆಕ್ಷೇಪಣೆಗೆ ಅವಕಾಶ ನೀಡದಿದ್ದರೆ ಕೊರ್ಟ್ ಮೊರೆ ಹೋಗಲು ಸಿದ್ದತೆ

ಆಳಂದ:ಎ.4: ಜನಸಂಖ್ಯೆ ಹಾಗೂ ಬೌಗೋಳಿಕ ಆಧಾರದ ಮೇಲೆ ಪ್ರಸಕ್ತ ಜಿಪಂ ಕ್ಷೇತ್ರಗಳ ಅಧಿಕೃತವಾಗಿ ಚುನಾವಣಾ ಆಯೋಗ ಮರು ವಿಂಗಡಿಸಿ ಮೂರು ದಿನಗಳ ಹಿಂದೆ ಪ್ರಕಟಿಸಿದ ಬಳಿಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಜತೆಗೆ ಕೆಲ ಮುಖಂಡರಿಗೆ ಧರ್ಮ ಸಂಕಟ ಎದುರಾಗಿದೆ. ತಾಲೂಕಿನ ಜಿಡಗಾ, ಚಿಂಚನಸೂರ, ಸರಸಂಬಾ ಮತ್ತು ನಿಂಬರ್ಗಾ ಜಿಪಂ ಕ್ಷೇತ್ರಗಳು ಕೈತಪ್ಪಿ ಹೋಗಿವೆ. ಆಕ್ಷೇಪಣೆ ನೀಡಲು ಇನ್ನೊಂದು ಅವಕಾಶ ಸಿಕ್ಕರೆ ಸರಿಪಡಿಸಲು ಮುಖಂಡರು ಮುಂದಾಗಿದ್ದಾರೆ. ಆದರೂ ಕ್ಷೇತ್ರ ಬದಲಾವಣೆ ಅದಲು-ಬದಲಿನಿಂದಾಗಿ ರಾಜಕೀಯ ದಿಕ್ಸೂಚಿ ಬದಲಾಗಿ ಮುಖಂಡರ ತಳಮಳಕ್ಕೆ ಕಾರಣವಾಗಿದೆ. ಮೊದಲಿನ ಏಳು ಜಿ.ಪಂ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಾದ ತಡಕಲ್, ಖಜೂರಿ ಮತ್ತು ಮಾದನಹಿಪ್ಪರಗಾ ಕ್ಷೇತ್ರಗಳು ಮುಂದುವರಿದಿವೆ. ಆದರೆ, ಈ ನಡುವೆ ಕೆಲ ಗ್ರಾಪಂ ಗಳು ವಿಂಗಡಿಸಲಾಗಿದೆ.ಮಾಡಿಯಾಳ್ ಹೊಸದಾಗಿ ಜಿಪಂ ಕ್ಷೇತ್ರ ರಚನೆಯಾಗಿದೆ. ಜಿಡಗಾ ಜಿಪಂ ಕ್ಷೇತ್ರ ರದ್ದಾಗಿ ಮಾದನ ಹಿಪ್ಪರಗಾ ಕ್ಷೇತ್ರಕ್ಕೆ ಈ ಗ್ರಾಮದ ಗ್ರಾಪಂ ಒಳಪಡಿಸಲಾಗಿದೆ. ಬದಲಾದ ಕ್ಷೇತ್ರ ಸರಸಂಬಾ ಬದಲು ಹಿರೋಳ್ಳಿ, ನಿಂಬರ್ಗಾ ಬದಲು ಕಡಗಂಚಿ, ಚಿಂಚನಸೂರ ಬದಲು ನರೋಣಾ, ಜಿಡಗಾ ರದ್ದಾಗಿ ಭೂಸನೂರ ಗ್ರಾಪಂ ಜಿಪಂ ಕ್ಷೇತ್ರ ನೀಡಲಾಗಿದೆ.

ಕೊರ್ಟ್ ಮೊರೆ ಹೋಗಲು ಸಿದ್ದತೆ-

ಜಿಪಂ ಕ್ಷೇತ್ರ ವಿಂಗಡಣೆಯಲ್ಲಿ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ. ರಾಜಕೀಯ ಫ್ರಭಾವದಿಂದಾಗಿ ಅವೈಜ್ಞಾನಿಕ ಮತ್ತು ಜನತೆಗೆ ಅನಾನುಕೂಲ ರೀತಿಯಲ್ಲಿ ಕ್ಷೇತ್ರ ರಚನೆಯಾಗಿದೆ.ಸದ್ಯ ಆಕ್ಷೇಪಣೆ ನೀಡಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹೈಕೋರ್ಟ್ ಮೋರೆ ಹೋಗಲಾಗುವುದು.-ಗುರುಶರಣ ಪಾಟೀಲ್ ಕೊರಳ್ಳಿ, ಕಾಂಗ್ರೆಸ್ ಮುಖಂಡ.

ನಿಂಬರ್ಗಾ ಜಿಪಂ ಕ್ಷೇತ್ರ ಮುಂದು ವರೆಸುವಂತೆ ಯಳಸಂಗಿ ಆಗ್ರಹ-

ಜನಸಂಖ್ಯೆ ಆಧಾರದ ಮೇಲೆ ಜಿಪಂ ಮರು ವಿಂಗಡನೆ ಮಾಡುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ನಿಂಬರ್ಗಾ ಜಿಪಂ ಕೆಂದ್ರ ಸ್ಥಾನವು ಸುಮಾರು ಅವಧಿಗಳಿಂದ ಕೆಂದ್ರ ಸ್ಥಾನವಾಗಿ ಬಂದಿರುತ್ತದೆ. ತಾಲೂಕಿನ ನಿಂಬರ್ಗಾ ಇತಿಹಾಸವುಳ್ಳ, ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು ಅಲ್ಲದೆ ಸುತ್ತ-ಮುತ್ತಲಿನ 25 ಗ್ರಾಮಗಳ ಜನರು ನಿಂಬರ್ಗಾವನ್ನು ಅವಲಂಬಿಸಿದ್ದಾರೆÉ. ನಿಂಬರ್ಗಾ ಜಿಪಂ ಕ್ಷೇತ್ರ ಮುಂದು ವರೆಸಬೇಕು.-(ಬಸವರಾಜ ಯಳಸಂಗಿ, ಯುವ ಮುಖಂಡ ನಿಂಬರ್ಗಾ.)

ಆಕ್ಷೇಪಣೆಗೆ ನಿರ್ದೆಶನ ಬಂದಿಲ್ಲ-

ಜಿಪಂ ಕ್ಷೇತ್ರ ಹೊಸ ವಿಂಗಡಣೆ ಕುರಿತು ಮತದಾರರಿಂದ ಆಕ್ಷೇಪಣೆ ಸಲ್ಲಿಸುವ ಅವಕಾಶ ಬಗ್ಗೆ ಸರ್ಕಾರದ ನಿರ್ಧೆಶನ ಬಂದಿಲ್ಲ.ಸರ್ಕಾರ ಸ್ಪಷ್ಟತೆ ನೀಡಿ ಏನಾದರೂ ಪುನರ್ ಸರ್ವೆ ಕಳುಹಿಸಿದರೆ, ಜಿಡಗಾ ಕ್ಷೇತ್ರ ಮುಂದುವರೆಸುವಂತೆ ವರದಿ ಸಲ್ಲಿಸಲಾಗುವುದು. ಕೆಲವು ಮಾರ್ಪಾಡುಗಳಿದ್ದರೆ ಸರಿಪಡಿಸಲಾಗುವುದು.-(ಯಲ್ಲಪ್ಪ ಸುಬೇದಾರ, ಆಳಂದ ತಹಶಿಲ್ದಾರ್.