ಜಿಪಂ ಕಚೇರಿಗೆ ಬೆಂಕಿ: ದಾಖಲೆಗಳು,ಯಂತ್ರೋಪಕರಣ ಭಸ್ಮ

ಕಲಬುರಗಿ,ಮಾ 25: ನಗರದ ಜಗತ್ ವೃತ್ತದ ಹತ್ತಿರದಲ್ಲಿರುವ ಜಿಲ್ಲಾ ಪಂಚಾಯತ ಮುಖ್ಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಬೆಂಕಿ ತಗುಲಿ ಮಹತ್ವದ ದಾಖಲೆಗಳು,ಯಂತ್ರ,ಪೀಠೋಪಕರಣಗಳು ಸುಟ್ಟು ಭಸ್ಮವಾಗಿದೆ.
ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಅಕೌಂಟ್ ಮತ್ತು ನರೇಗಾ ವಿಭಾಗದ ದಾಖಲೆಗಳು ಸುಟ್ಟುಹೋಗಿವೆ.ಇದಲ್ಲದೇ ಕಂಪ್ಯೂಟರ್,ಲ್ಯಾಪ್‍ಟಾಪ್ ,ಎಸಿ,ಕಟ್ಟಿಗೆಯ ರ್ಯಾಕ್‍ಗಳು ಸಹ ಭಸ್ಮವಾಗಿವೆ.
ಎರಡು ಅಗ್ನಿಶಾಮಕದಳದ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಹಾನಿಯಾದ ವಸ್ತುಗಳ ಮೌಲ್ಯ ಇನ್ನೂ ಗೊತ್ತಾಗಿಲ್ಲ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ