ಜಿನ್ನಾಪುರ ಗ್ರಾಮಸ್ಥರಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ

ದೇವದುರ್ಗ.ಮಾ.೩೦- ಗಬ್ಬೂರು ಸಮೀಪದ ಜಿನ್ನಾಪುರ ಗ್ರಾಮದಲ್ಲಿ ಯುಗಾದಿ ನಿಮಿತ್ತ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗಾಗಿ ಗ್ರಾಮಸ್ಥರು ಪ್ರಸಾದ ವ್ಯವಸ್ಥೆ ಕೈಗೊಂಡಿದ್ದಾರೆ.
ಗ್ರಾಮಸ್ಥರು ಸೇರಿಕೊಂಡು ಪ್ರತಿವರ್ಷ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದು ಸತತ ೧೭ವರ್ಷಗಳಿಂದ ಭಕ್ತರ ಸೇವೆ ಮಾಡುತ್ತಿದ್ದಾರೆ. ಮಾ.೨೫ರಿಂದ ಶಿಬಿರ ಆರಂಭಿಸಿದ್ದು ಏಪ್ರಿಲ್ ರವರೆಗೆ ನಡೆಯಲಿದೆ. ಭಕ್ತರಿಗೆ ರಾತ್ರಿ ನಿದ್ರಿಸಲು ವ್ಯವಸ್ಥೆ, ನೀರು ನೆರಳಿನ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅನಾರೋಗ್ಯ ತತ್ತಾದರೆ ಔಷಧ ವ್ಯವಸ್ಥೆ ಕೂಡ ಮಾಡಲಾಗಿದೆ.
ಪಾದಯಾತ್ರೆ ಕೈಗೊಂಡ ಭಕ್ತರಿಗೆ ಪ್ರತಿದಿನ ಬೆಳಗ್ಗೆ ಉಪಾಹಾರ ಉಪ್ಪಿಟ್ಟು, ಸಿರಾ, ಒಗ್ಗರಣೆ ಭಜ್ಜಿ, ಅವಲಕ್ಕಿ ಮಾಡಲಾಗುತ್ತಿದೆ. ಮಧ್ಯಾಹ್ನ ಲಾಡು, ಪಾಯಿಸ, ಸಾವಿಗೆ, ಅನ್ನ ಸಾಂಬರ್, ಮಿರ್ಚಿ ಮಾಡಲಾಗುತ್ತಿದೆ. ಬಿಸಿಲಿನ ತಾಪ ತಗ್ಗಿಸಲು ಮೊಸರನ್ನ, ಮಜ್ಜಿಗೆ, ಹಣ್ಣುಗಳನ್ನು ಭಕ್ತರಿಗೆ ನೀಡಿ ಗ್ರಾಮಸ್ಥರು ಭಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಈಡಿ ಗ್ರಾಮಸ್ಥರು ಕೈಜೋಡಿಸಿದ್ದಾರೆ.
೩೦ಗಬ್ಬೂರು-೧