ಜಿನಮಂದಿರದ 25ನೇ ಮಹೋತ್ಸವ

ಚನ್ನಮ್ಮನ ಕಿತ್ತೂರ, ಮಾ2: ಸಮೀಪದ ಗಂಧದನಾಡು ಖಾನಾಪೂರ ತಾಲೂಕಿನ ಕಾಡಿನಂಚಿನಲ್ಲಿರುವ ಐತಿಹಾಸಿಕ ಚಂಪಾವತಿ ನಗರ ಛಾಪಗಾಂವದಲ್ಲಿ ಮಾರ್ಚ 3ರಂದು ಭಗವಾನಶ್ರೀ 1008 ಆದಿನಾಥ ಜಿನಮಂದಿರ ನಿರ್ಮಿಸಿ 25 ವರ್ಷ ಗತಿಸಿದ್ದು ಇದರ ಪ್ರಯುಕ್ತ ಬೆಳ್ಳಿ ಮಹೋತ್ಸವ, ಸಮ್ಮೇದ ಶಿಖರ್ಜಿ ವಿಧಾನ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ಪಂಚಾಮೃತಅಭಿಷೇಕ, ಸಮ್ಮೇದಶಿಖರ್ಜಿ ವಿಧಾನ, ಧ್ವಜಾರೋಹಣ, ದೀಪ ಪ್ರಜ್ವಲನೆ, ಮುನಿಶ್ರೀಯವರಿಂದ ಆರ್ಶಿವಚನ, ದಾನಿಗಳ ಹಾಗೂ ಅಥಿತಿಗಳ ಸತ್ಕಾರ, ನೇರವೇರುವವು.
ಈ ಕಾರ್ಯಕ್ರಮಕ್ಕೆ ಮುಖ್ತ ಅಥಿತಿಗಳಾಗಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಖಾನಾಪೂರ ಶಾಸಕದ ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಪ್ರಮೋದ ಕೊಚೇರಿ, ಪ್ರತಿಷ್ಠಾಚಾರ್ಯರು, ಛಾಪಗಾಂವ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಗಣ್ಯರು, ಇನ್ನಿತರರು ಭಾಗವಹಿಸಲಿದ್ದಾರೆಂದು ಜೈನ ಯುವ ಸಂಘಟನೆ ಖಾನಾಪೂರ ಮತ್ತು ಬೆಳಗಾವಿ ಹಾಗೂ ಸಮಸ್ತ ಜೈನ ಬೆಳಗಾವಿ ಇವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.