ಸಂಜೆವಾಣಿ ವಾರ್ತೆ
ಸಂಡೂರು : ಜು: 26: ಸಹಾಯಕ ಆಯುಕ್ತರು ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯದಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರು, ಸಿ.ಎಲ್.ಪಿ. ಕಾರ್ಯದರ್ಶಿಗಳು ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕರಾಂ ರವರ ನೇತೃತ್ವದಲ್ಲಿ ಪರಿಶೀಲಿಸಿದರು. ನಂತರ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗಲು ಸಂಡೂರು ತಾಲೂಕಿನ ಜೋಗ ಗ್ರಾಮದ ಬಳಿ ಇರುವ ಜಿನಗು ಕೆರೆಗೆ ನಾರಿಹಳ್ಳ ಜಲಾಶಯದಿಂದ ನೀರು ಬಿಡಲು ಆದೇಶಿಸಿದರು. ಸಹಾಯಕ ಆಯುಕ್ತರು, ಸಂಡೂರು ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾ.ಪಂ. ಇ.ಓ. ಹೆಚ್. ಷಡಾಕ್ಷರಯ್ಯ ಅಲ್ಲದೆ ಹಲವಾಋಉ ರೈತರು ಉಪಸ್ಥಿತರಿದ್ದರು.