ಜಿದ್ದಾಜಿದ್ದಿ : ಗ್ರಾಮೀಣ ವಿಧಾನಸಭಾ ಕ್ಷೇತ್ರ

ದದ್ದಲ್, ಹವಾಲ್ದಾರ್, ನರಸಿಂಹ ನಾಯಕ ನಡುವೆ ಸ್ಪರ್ಧೆ: ಗೆಲುವಿನ ನಿರೀಕ್ಷೆಯಲ್ಲಿ ನಾಯಕರು !
ಹುಸೇನಪ್ಪ ಗಂಜಹಳ್ಳಿ
ರಾಯಚೂರು, ಏ.೧೩- ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದಂತೆ ಗ್ರಾಮೀಣ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ರಂಗೇಳುತ್ತಿದೆ.
ಮೇ ೧೦ ರಂದು ನಡೆಯುವ ಚುನಾವಣೆಗೆ
ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ದಿನ ಚುನಾವಣೆ ಪ್ರಚಾರದ ಕಾವು ಜೋರಾಗಿದೆ.
ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್, ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ. ಸಣ್ಣ ನರಸಿಂಹ ನಾಯಕ ಅವರ ಬೆಂಬಲಿಗರ ನಡುವೆ ಪ್ರಚಾರದ ಪೈಪೋಟಿ ತೀವ್ರವಾಗಿದ್ದು. ಕ್ಷೇತ್ರದ ಅಭ್ಯರ್ಥಿಗಳ ಗೆಲುವು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಸನಗೌಡ ದದ್ದಲ್, ತಿಪ್ಪರಾಜು ಹವಾಲ್ದಾರ್ ನರಸಿಂಹ ನಾಯಕ ಅವರ ಸಾಧಕ ಭಾದಕಗಳ ಆದರದ ಮೇಲೆ ಈ ಭಾರಿ ಕ್ಷೇತ್ರದ ಮತದಾರರು ನಾಯಕರನ್ನು ಗೆಲ್ಲುಸುವ ನಿರೀಕ್ಷೆ ಇದೇ ಎಂಬುದು ಕ್ಷೇತ್ರದ ಜನರಲ್ಲಿ ಗುಸು ಗುಸಿನ ಚರ್ಚೆ ಮುಂದುವರಿದಿದೆ.
ಮೂವರ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಮನೆಯಿಂದ ಮನೆಗೆ ಭೇಟಿ ಕೊಡುತ್ತಿದ್ದಾರೆ. ಗೆಲುವಿಗಾಗಿ ಅವಿಶ್ರಾಂತ ಪ್ರಚಾರ ನಡೆಸುತ್ತಿದ್ದು, ಇಬ್ಬರು ನಾಯಕರ ಬಗ್ಗೆ ಸಮಾನಾಂತರ ಮಾತುಗಳು ಕೇಳಿ ಬರುತ್ತಿವೆ.
೨೦೧೩ ರ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ತಿಪ್ಪರಾಜು ಹವಾಲ್ದಾರ್ ಅವರು ಗ್ರಾಮೀಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರಿಗೂ ಸಾಕಷ್ಟು ಬೆಂಬಲಗರ ಪಡೆ ಇದೆ. ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಈ ಭಾರಿ ಕ್ಷೇತ್ರದಲ್ಲಿ ಸ್ಪರ್ದಿಸಲಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನಪರ ಆಡಳಿತ ಮುಂದಿಟ್ಟುಕೊಂಡು ಪ್ರಚಾರ ಕೈಗೊಂಡಿದ್ದರೆ. ಈ ಮೂರು ಜನ ನಾಯಕರು ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆ ಕಾಣುತ್ತಿದ್ದಾರೆ. ಅಂತಿಮವಾಗಿ ಕ್ಷೇತ್ರದಲ್ಲಿ ಯಾರ ಗೆಲುವು ಎಂಬುದು ಕುತೂಹಲ ಕೆರಳಿಸಿದೆ.
ಅಬ್ಬರದ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್, ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಅವರು ಚುನಾವಣೆ ಸಮೀಪಸುತ್ತಿದಂತೆ ಮತದಾರರ ಮನವೊಲಿಸುವ ಕೆಲಸವನ್ನು ಬಿರುಸಿನಿಂದ ಆರಂಭಿಸಿದ್ದಾರೆ. ಮಿಂಚಿನ ಅಬ್ಬರವನ್ನು ಗಮನಿಸಿದರೆ ಗ್ರಾಮೀಣ ಕ್ಷೇತ್ರದ ಚಿತ್ರಣವು ಬದಲಾವಣೆಯಾದರೂ ಅಚ್ಚರಿ ಪಡಬೇಕಿಲ್ಲ.
ಕ್ಷೇತ್ರವನ್ನು ಘಟಾನುಘಟಿ ನಾಯಕರು ಅಳಿದ್ದಾರೆ.
ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆ ಗಮನಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಸ್ಪರ್ಧೆಗೆ ಕಣಕ್ಕೆ ಇಳಿದ ಅಭ್ಯರ್ಥಿಗಳು ಒಮ್ಮೆ ಗೆಲುವು ಸಾಧಿಸಿದರೆ ಮುಂದಿನ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟಬುತ್ತಿ ಎಂಬದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳೆವಣಿಗೆಗೆ ಸಾಕ್ಷಿ.! ಈಗೇ
ಕ್ಷೇತ್ರದಲ್ಲಿ ಹಲವು ರಾಜಕೀಯ ಬೆಳೆವಣಿಗಳು ನಡೆದಿದೆ.
ಆದರೆ ಈ ಭಾರಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್, ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಹಾಗೂ ಜೆಡಿಎಸ್ ಸಣ್ಣ ನರಸಿಂಹ ನಾಯಕ ಮಧ್ಯೆ ಈಗಲೂ ತೀವ್ರ ಸ್ಪರ್ಧೆ ಕಂಡು ಬರುತ್ತಿದ್ದು, ಹಗ್ಗಜಗ್ಗಾಟದಲ್ಲಿ ಯಾರೂ ಗೆಲ್ಲುತ್ತಾರೆ ಎಂಬುದು ಕ್ಷೇತ್ರದ ಕುತೂಹಲ ಮೂಡಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಗೆದ್ದು ಬಿಗಬೇಕು ಎಂಬ ಹಂಬಲದಿಂದ ಅಭಿವೃದ್ಧಿ ಕಾರ್ಯಗಳು ಮತದಾರ ಮುಂದಿಟ್ಟು ಚುನಾವಣೆ ಕಸರತ್ತು ನಡೆಸಿದ್ದಾರೆ. ಚುನಾವಣೆ ಪ್ರಚಾರದ ರಂಗು ಮತ್ತಿಷ್ಟು ತಾರಕ್ಕೇರಿದೆ.
ಹಿಂದಿನ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ ರಾಯಪ್ಪ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಅವರು ೪ ಸಾವಿರ ಅಧಿಕ ಮತಗಳಿಂದ ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದರು, ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿಜೆಪಿ ತಿಪ್ಪರಾಜು ಹವಾಲ್ದಾರ್ ವಿರುದ್ಧ೧೦ ಸಾವಿರ ಮತಗಳಿಂದ ಗೆದ್ದಿದ್ದರು. ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿರುವದರಿಂದ ಜಿದ್ದಾ-ಜಿದ್ದಿ ನಡೆಯತ್ತಲೆ ಇರುತ್ತದೆ.
ಕ್ಷೇತ್ರ ಪರಿಚಯ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ೨.೨೭ ಲಕ್ಷ ಮತದಾರ ಪೈಕಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಿಗರಿದ್ದು ಉಳಿದಂತೆ ಹಿಂದುಳಿದವರು,ಲಿಂಗಾಯತರು, ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ಮುಸ್ಲಿಂ ಮತದಾರ ಕಡಿಮೆ ಇದೆ.
ಮತದಾರರೇ ಅಂತಿಮ ತೀರ್ಪು
ಕಳೆದ ಎರಡು ಚುನಾವಣೆಗಳು ಗಮನಿಸಿದರೆ ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸಿದ ಅಭ್ಯರ್ಥಿ ಮತ್ತೊಮ್ಮೆ ಸೋಲನ್ನು ಕಂಡಿದ್ದಾರೆ. ಆದರೆ
ಗ್ರಾಮೀಣ ಕ್ಷೇತ್ರದಲ್ಲಿ ಈ ಭಾರಿ ಪ್ರಬಲ ನಾಯಕರ ಪೈಪೋಟಿ ತೀವ್ರ ಆಗಿರುವದರಿಂದ ಮತದಾರರ ಅಂತಿಮ ತೀರ್ಪು ನಾಯಕರ ಗೆಲುವಿನ ಸಂಕೇತ.!

ಬಾಕ್ಸ್
ಮತದಾರ ಸಂಖ್ಯೆ
ಒಟ್ಟು ಮತದಾರರು : ೨೨೭೮೯೧
ಪುರುಷರು : ೧೧೨೧೦೯
ಮಹಿಳೆರು : ೧೧೫೭೨೭
ಇತರೆ : ೫೫

ಪಕ್ಷದ ಹಿನ್ನೋಟ
೨೦೧೩ ರಲ್ಲಿ ಬಿಜೆಪಿನಿಂದ ತಿಪ್ಪರಾಜು ಹವಾಲ್ದಾರ್ ಸ್ಪರ್ದಿಸಿ ೫೦, ೪೯೭ ಮತಗಳಿಂದ ಜಯಗಳಿಸಿದ್ದರು. ಅನಂತರ ೨೦೧೮ ಕಾಂಗ್ರೆಸ್ ನಿಂದ ಬಸನಗೌಡ ದದ್ದಲ್ ಸ್ಪರ್ದಿಸಿ ೬೬,೬೫೬ ಮತಗಳಿಸುವ ಮೂಲಕ ವಿಜೇತರಾದರು.