ಜಿದ್ದಾಜಿದ್ದಿಯಿಂದ ನಡೆದ ಹೊನ್ನಳ್ಳಿ ಉಪಾಧ್ಯಕ್ಷ ಚುನಾವಣೆ ಮಲ್ಲಿಕಾರ್ಜುನಸ್ವಾಮಿ ರೋಚಕ ಗೆಲವು

ಲಿಂಗಸುಗೂರು,ಆ.೦೫-
ಲಿಂಗಸುಗೂರು ತಾಲೂಕಿನ ಸಮೀಪ ಹೊನ್ನಳ್ಳಿ ಗ್ರಾಮ ಪಂಚಾಯತಿ ಚುನಾವಣೆ ಶುಕ್ರವಾರ ನೆಡೆಯಿತು.
ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿಯಿಂದ ಚುನಾವಣೆ ನೆಡೆಯಿತು, ಉಪಾಧ್ಯಕ್ಷ ಸ್ಥಾನದಿಂದ ಸಿದ್ದಪ್ಪ ಹಾಗೂ ಮಲ್ಲಿಕಾರ್ಜುನಸ್ವಾಮಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಗ್ರಾಪಂ ಒಟ್ಟು ಸದಸ್ಯರು ೧೮ ಅದರಲ್ಲಿ ಒಬ್ಬರು ಗೈರು ಆಗಿದ್ದರಿಂದ ೧೭ ಸದಸ್ಯರು ಹಾಜರು ಇದ್ದರು.
ಚುನಾವಣೆ ನೆಡೆಯಿತು ಇದರಲ್ಲಿ ಒಂದು ಮತ ತಿರಸ್ಕರವಾಯಿತು. ಇನ್ನೂ ಉಳಿದ ೧೬ಮತಗಳಲ್ಲಿ ಇಬ್ಬರಿಗೆ ೮ಮತಗಳ ಬಿದ್ದು ಇಬ್ಬರಿಗೆ ಸಮಬಲವಾಯಿತು.
ಸಮಬಲವಾಗಿದ್ದರಿಂದ ಚೀಟಿ ಎತ್ತುವ ಮೂಲಕ ಕೊನೆಗೂ ಅದೃಷ್ಟ ಲಕ್ಷ್ಮಿ ಮಲ್ಲಿಕಾರ್ಜುನ ಸ್ವಾಮಿ ಕೈ ಹಿಡಿದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಸಿಡಿಪಿಒ ಗೋಕಲ್, ಪಿಡಿಒ ಬಸವರಾಜ ಸೇರಿದಂತೆ ಇದ್ದರು.