ಜಿಡಗಾ ಮುಗಳಖೋಡ ಶ್ರೀಗಳ ಜಯಂತಿ: 22ಜನರಿಗೆ ನೇತ್ರಶಸ್ತ್ರ ಚಿಕಿತ್ಸೆ

ಕಲಬುರಗಿ,ಸೆ.23- ಪೂಜ್ಯ ಶ್ರೀಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಜಿಡಗಾ ಮುಗಳಖೋಡ ಇವರ 94 ನೇಯ ಜಯಂತ್ಯುತ್ಸವದ ಪ್ರಯುಕ್ತ ಸೆ.18 ರಂದು ನಂದಿಕೂರದ ತೆಲ್ಕರ್ ನಗರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಶಿಬಿರದಲ್ಲಿ 22 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿದ ಫಲಾನುಭವಿಗಳಿಗೆ ನಗರದ ಕೆಸರಟಗಿ ರಸ್ತೆ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ಶಿಬಿರದಲ್ಲಿ ನಂದಿಕೂರು, ಖಣದಾಳ ಗ್ರಾಪಂಗಳ ಜನರು ಸದುಪಯೋಗ ಪಡೆದುಕೊಂಡಿರುತ್ತಾರೆ.
ಅಲ್ಲದೇ ಕೆಲವರಿಗೆ ಸಕ್ಕರೆ ಕಾಯಿಲೆಯ ಮತ್ತು ರಕ್ತ ಒತ್ತಡ ಇರುವುದರಿಂದ ಒಂದು ವಾರ ನಂತರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಬಾಬುರಾವ್ ಮುಖ್ಯಸ್ಥರು ಅನುಗ್ರಹ ಕಣ್ಣಿನ ಆಸ್ಪತ್ರೆ ಅವರು ತಿಳಿಸಿದ್ದಾರೆ. ಪವನ್ ಕುಮಾರ ಬಿ ವಳಕೇರಿ, ಶರಣಗೌಡ ಎಂ ಪಾಟೀಲ್ ನಂದಿಕೂರ, ಬಸಲಿಂಗ್ ಬಿ ಪಾಟೀಲ್, ಬಸವರಾಜ ಜಮಶೆಟ್ಟಿ, ಶಕೀಲ ಉತ್ನಾಳ, ಕಾಂತ ಬಾಯಿ ಕಟ್ಟಿಮನಿ, ವಿಠ್ಠಬಾಯಿ ಪಾಟೀಲ, ಅನಿಲ್ ಕೋರ್ಬ ಇದ್ದರು.