ಜಿಟಿಟಿಸಿ ಕೈಗಾರಿಕಾ ತರಬೇತಿಯಿಂದ ಉದ್ಯೋಗಾವಕಾಶ

ರಾಯಚೂರು,ಮೇ.೧೯- ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ ನೀಡುವ ಕೈಗಾರಿಕೆ ತರಬೇತಿಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಂಡುಬರುತ್ತಿದೆ. ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿಗಳು ಈ ತರಬೇತಿ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಟಿಟಿಸಿ ಪ್ರಾಚಾರ್ಯ ರಾಜಕುಮಾರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಡಿಪ್ಲೊಮೊ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಗಳಿಗೆ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ.ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶಾತಿ ನೀಡಲಾಗುವುದು ಎಂದರು.
ಇನ್ ಟೂಲ್ ಅಂಡ್ ಡೈ ಮೇಕಿಂಗ್ ೩ ವರ್ಷದ ವಿಷಯಾಧಾರಿತ ತರಬೇತಿ ಹಾಗೂ ಈ ಕೋರ್ಸ್ ೧ ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ ಒಳಗೊಂಡಿದೆ. ಈ ಅವಧಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ.೧೪ ಸಾವಿರ ರಿಂದ ೨೦ ಸಾವಿರದವರೆಗೆ ತರಬೇತಿ ಭತ್ಯೆಯನ್ನು ಕೈಗಾರಿಕಾ ತರಬೇತಿಯೇ ನೀಡುತ್ತದೆ. ಈ ಕೋರ್ಸ್ ಗೆ ಪ್ರವೇಶಾತಿ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಥಿತೆ ಹೊಂದಿರಬೇಕು.ಹಾಗೂ ಐಟಿಐ ಮತ್ತು ಪಿಯುಸಿ ಸೈನ್ಸ್ ತೇರ್ಗಡೆಯಾದವರಿಗೆ ಕೋರ್ಸ್ ೩ ನೇ ಸೆಮಿಸ್ಟರ್ ಗೆ ಸಂಸ್ಥೆಯ ನಿಯಮಾನುಸಾರ ಲ್ಯಾಟರಲ್ ಎಂಟ್ರಿ ಮೂಲಕ ನೇರ ಪ್ರವೇಶ ಪಡೆಯಲು ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಅಮರೇಶ ಇದ್ದರು.