ಜಿಜಾಮಾತಾ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಬೀದರ್: ಏ.4:ಮಕ್ಕಳು ನೀವು ಸ್ವಇಚ್ಛೆಯಿಂದ ರಸ್ತೆ ಬದಿ, ಖಾಲಿ ಇದ್ದ ಜಾಗದಲ್ಲಿ ಹಾಗೂ ಮನೆಯ ಅಂಗಳದಲ್ಲಿ ಸಸಿಗಳನ್ನು ನೆಟ್ಟಿ ಪೆÇೀಷಿಸಿದರೆ ನಿಮ್ಮಿಂದ ಬರುಡು ಭೂಮಿ ಹಸಿರಾಗಹುದು, ಎಂದು ರೋಟರಿ ಕ್ಲಬ್ ಕ್ವೀನ್ಸ್ ನ ಅಧ್ಯಕ್ಷರಾದ ಸುಜಾತ ಹೊಸಮನಿ ಹೇಳಿದರು.
ಅವರ ಬುಧವಾರ ರೋಟರಿ ಕ್ಲಬ್ ಬೀದರ್ ಕ್ವೀನ್ಸ್ ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ಸಹಯೋಗದಲ್ಲಿ ನಗರದ ಜಿಜಾಮಾತಾ ಶಾಲೆಯಲ್ಲಿ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲು ಮರ-ಗಿಡಗಳನ್ನು ನೆಡುವದರಿಂದ ನಮಗೆ ಉತ್ತಮ ಗಾಳಿ ತೊರೆಯುತ್ತದೆ ಆದರಿಂದ ನಾವೆಲ್ಲರೂ ಮರ-ಗಿಡಗಳನ್ನು ಬೆಳೆಸಬೇಕೆಂದರು
ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಹಾಣ್ಣಾ ರೋಜ್ ಮಾತನಾಡಿ ಪರಿಸರ ಕಾಳಜಿ ಇದ್ದರೆ ಮಾತ್ರ ನಮ್ಮ ಪರಿಸರ ವನದಿಂದ ಕಾಣಬಹುದು. ಮನೆಗೊಂದು ಮರ ಇದ್ರೆ ಊರಿಗೊಂದು ವನ ನಿರ್ಮಾಣ ಮಾಡಬಹುದು ಎಂದರು
ರೋಟರಿ ಕ್ಲಬ್ ಕ್ವೀನ್ಸ್ ಹಾಗೂ ಹೆಲ್ಪಿ ಹ್ಯಾಂಡ್ಸ್ ಸಂಸ್ಥೆಯ ಅಧ್ಯಕ್ಷರಿಂದ ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದು ಪದಶೆಟ್ಟಿ ಮತ್ತು ಉಪಾಧ್ಯಕ್ಷ ಪ್ರವೀಣಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಪರಮೇಶ್ವರ ಬಿರಾದಾರ್, ರಮೇಶ ಬಿರಾದಾರ್, ಶಿಕ್ಷಕರಾದ ಆನಂದ ಸಂಜು ಪಾಟೀಲ್, ನಾಗರತ್ನ ಅನಿಲ್ ಕುಮಾರ್, ರಾಮ್ನಾಥ್ ರಾಜಕುಮಾರ್ ಗಾದಗಿ, ಹ್ಯಾಪಿ ಹ್ಯಾಂಡ್ ಸಂಸ್ಥೆಯ ಸದಸ್ಯರಾದ ಅನುಷಾ ಹಾಗೂ ಶಾಲೆಯ ವಿದ್ಯಾರ್ಥಿಗಳಿದ್ದರು.