ಜಿಜಾಮಾತಾ ಶಾಲೆಯಲ್ಲಿ ಪರಿಸರ ದಿನಾಚರಣೆ

ಬೀದರ್:ಜೂ.7: ರೋಟರಿ ಕ್ಲಬ್ ಬೀದರ್ ಕ್ವೀನ್ಸ್ ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ಸಹಯೋಗದಲ್ಲಿ ಜಿಜಾಮಾತಾ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳು ನೀವು ಸ್ವಇಚ್ಛೆಯಿಂದ ರಸ್ತೆ ಬದಿ, ಖಾಲಿ ಇದ್ದ ಜಾಗ ಹಾಗೂ ಮನೆಯ ಅಂಗಳದಲ್ಲಿ ಗಿಡವನ್ನು ನೆಟ್ಟಿದರೆ ನಿಮ್ಮಿಂದ ಬರುಡು ಭೂಮಿ ಹಸಿರ ವಾಗಿರಿಸಬಲ್ಲಿರಿ, ಎಂದು ರೋಟರಿ ಕ್ಲಬ್ ಕ್ವೀನ್ಸ್ ನ ಅಧ್ಯಕ್ಷರಾದ ಸುಜಾತ ಹೊಸಮನಿ ತಿಳಿಸಿದರು.
ಪರಿಸರ ಕಾಳಜಿ ಇದ್ದರೆ ಮಾತ್ರ ನಮ್ಮ ಪರಿಸರ ವನದಿಂದ ಕಾಣಬಹುದು. ಮನೆಗೊಂದು ಮರ ಇದ್ರೆ ಊರಿಗೊಂದು ವನ ನಿರ್ಮಾಣ ಮಾಡಬಹುದು ಎಂದು ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಹಾಣ್ಣಾ ರೋಜ್ ಮಕ್ಕಳಿಗೆ ತಿಳಿಸಿದರು.

ರೋಟರಿ ಕ್ಲಬ್ ಕ್ವೀನ್ಸ್ ಹಾಗೂ ಹೆಲ್ಪಿ ಹ್ಯಾಂಡ್ಸ್ ಸಂಸ್ಥೆಯ ಅಧ್ಯಕ್ಷರಿಂದ ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದು ಪದಶೆಟ್ಟಿ ಮತ್ತು ಉಪಾಧ್ಯಕ್ಷ ಪ್ರವೀಣಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಪರಮೇಶ್ವರ ಬಿರಾದಾರ್, ರಮೇಶ ಬಿರಾದಾರ್, ಶಿಕ್ಷಕರಾದ ಆನಂದ ಸಂಜು ಪಾಟೀಲ್, ನಾಗರತ್ನ ಅನಿಲ್ ಕುಮಾರ್, ರಾಮ್ನಾಥ್ ರಾಜಕುಮಾರ್ ಗಾದಗಿ, ಹ್ಯಾಪಿ ಹ್ಯಾಂಡ್ ಸಂಸ್ಥೆಯ ಸದಸ್ಯರಾದ ಅನುಷಾ ಹಾಗೂ ಶಾಲೆಯ ವಿದ್ಯಾರ್ಥಿಗಳಿದ್ದರು.