ಜಿಎಸ್‍ಟಿ ಹೆಚ್ಚಿಸದಂತೆ ವರ್ತಕರ ಸಂಘÀ ಮನವಿ

ಶಿರಹಟ್ಟಿ,ಜು.17: ಬ್ರ್ಯಾಂಡೆಡ್ ಆಹಾರ ವಸ್ತುಗಳಿಗೆ ಮಾತ್ರ ಇರುವ ತೆರಿಗೆಯನ್ನು ಈಗ ಪ್ಯಾಕಮಾಡಿರುವ ಲೇಬಲ್ ಇರುವ ಗೋದಿ ಹಿಟ್ಟು ಸೇರಿದಂತೆ ಹಲವಾರು ಆಹಾರ ದಾನ್ಯಗಳ ಮೇಲೆ ಶೇ 5 ತೆರಿಗೆ ವ್ಯಾಪ್ತಿಗೆ ತರಲು ಇತ್ತೀಚಿಗೆ ಜಿಎಸ್‍ಟಿ ಮಂಡಿಳಿಯು ಶಿಫಾರಸ್ಸು ಮಾಡಿದ್ದು ಇದನ್ನು ಖಂಡಿಸಿ ಶಿರಹಟಟ್ಟಿ ನಗರ ವರ್ತಕರು ಸಂಘದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.
ಶಿರಹಟ್ಟಿ ಪಟ್ಟಣದ ವರ್ತಕರ ಸಂಘದ ವತಿಯಿಂದ ಆಹಾರ ದಾನ್ಯಗಳ ಮೇಲೆ ಜಿಎಸ್‍ಟಿ ಹೆಚ್ಚಿಸದಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಇತ್ತೀಚಿಗೆ ಎಲ್ಲ ಆಹಾರ ದಾನ್ಯಗಳ ದರಗಳು ಸಹ ಹೆಚ್ಚಿಯಾಗಿದ್ದು, ಈರೀತಿ ತೆರಿಗೆ ವಿಧಿಸುವುದರಿಂದ ರೈತರಿಗೆ ಗ್ರಾಹಕರಿಗೆ ಹಾಗೂ ವ್ಯಾಪಾಸ್ಥರಿಗೆ ಬಹಳ ಹೊರೆಯಾಗುತ್ತದೆ. ಮುಖ್ಯಮಂತ್ರಿಗಳು ಜಿಎಸ್‍ಟಿ ದರ ನಿರ್ಧರಿಸುವ ಕಮೀಟಿ ಸದಸ್ಯರಿದ್ದು ತಮ್ಮದೇ ಸರಕಾರವಿದೆ ಆದ್ದರಿಂದ ತಮ್ಮ ಸರಕಾರವು ಆಹಾರ ಧ್ಯಾನ್ಯಗಳ ಮೇಲೆ ಶೇ 5 ರಷ್ಟು ತೆರಿಗೆಗೆ ಸಂಬಂಧಿಸುವ ಯಾವುದೇ ಶಿಫಾರಸ್ಸು ಅನುಷ್ಠಾನಗೊಳಿಸಬಾರದು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಿರಹಟ್ಟಿ ನಗರ ವರ್ತಸಂಘದ ಆದ್ಯಕ್ಷ ಸುರೇಶ ಕಪ್ಪತ್ತನವರ, ಚಂದ್ರಣ್ಣ ನೂರಶೆಟ್ಟರ, ವಾಸಣ್ಣ ಪಾಶ್ಚಾಪೂರ,ಉಮೇಶ ತೇಲಿ, ಪ್ರಕಾಶ ಬೋರಶೆಟ್ಟರ,ದೊಡ್ಡಬಸಪ್ಪ ಪಾಟೀಲ್, ಬಸವರಾಜ ಹೊಸೂರ,ಮುತ್ತು ಅಕ್ಕಿ, ಪ್ರಕಾಶ ಮಜ್ಜಗಿ, ಮಂಜು ಬಳಿಗಾರ, ಸೋವiಣ್ಣ ರೆಡ್ಡರ, ಜಗದೀಶ ಬಕ್ಸದ, ಮಾಂತೇಶ ಪವಾಡಶೆಟ್ಟರ,ಸಂಪತ್ ಮುಂತಾದವರು ಉಪಸ್ಥಿತರಿದ್ದರು.