ಜಿಎಸ್‌ಟಿ ಸಂಗ್ರಹ ೧೨.೭ರಷ್ಟು ಏರಿಕೆ

ನವದೆಹಲಿ,ಏ.೨- ದೇಶದಲ್ಲಿ ಮಾರ್ಚ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಶೇ.೧೨.೭ರಷ್ಟು ಏರಿಕೆಯಾಗಿದ್ದು ಒಟ್ಟಾರೆ ೧,೬೦,೧೨೨ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ೨೦೨೨-೨೩ ಹಣಕಾಸು ವರ್ಷದ ಅಂತ್ಯದಲ್ಲಿ ಒಟ್ಟಾರೆ ೧೮.೧ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ೨೦೨೧-೨೨ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.೨೨ ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದೆ.ಮಾಸಿಕ ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿ ಸಂಹಗ್ರವಾದ ಎರಡನೇ ಅತಿ ಹೆಚ್ಚಿನ ಮೊತ್ತದ ಸರಕು ಸೇವಾ ತೆರಿಗೆ ಸಂಹಗ್ರವಾಗಿದೆ. ಅಂತರ್-ರಾಜ್ಯ ಮಾರಾಟ ಮತ್ತು ಆಮದುಗಳ ಮೇಲೆ ವಿಧಿಸಲಾದ ಜಿಎಸ್‌ಟಿ ಅಥವಾ ಐಜಿಎಸ್‌ಟಿ ಸಂಗ್ರಹವನ್ನು ಮಾರ್ಚ್‌ನಲ್ಲಿ ೮೨,೯೦೭ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಇದು ೨೦೨೨ರ ಏಪ್ರಿಲ್ ೨೦೨೨ ರಲ್ಲಿ ೮೧,೯೩೯ ಕೋಟಿ ರೂ ದಾಖಲಾಗಿತ್ತು
ಫೆಬ್ರವರಿಯಲ್ಲಿನ ವಹಿವಾಟುಗಳಿಗಾಗಿ ಮಾರ್ಚ್ ಸಂಗ್ರಹಣೆಗಳು, ಆಮದುಗಳಿಂದ ಬರುವ ಆದಾಯವು ನಿಧಾನಗತಿಯ ಏರಿಕೆಯನ್ನು ಕಂಡರೂ ಬಲವಾದ ದೇಶೀಯ ಬೇಡಿಕೆಯನ್ನು ಸೂಚಿಸುತ್ತದೆ.
“ಮಾಸಿಕದಲ್ಲಿ, ಸರಕುಗಳ ಆಮದು ಆದಾಯ ಶೇ. ೮ ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಸೇವೆಗಳ ಆಮದು ಸೇರಿದಂತೆ ಆದಾಯದ ಪ್ರಮಾನ ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.೧೪ ಹೆಚ್ಚಾಗಿದೆ” ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆಮದು ಮಾಡಿಕೊಂಡ ಐಷಾರಾಮಿ ಮತ್ತು ಪಾಪ ಸರಕುಗಳ ಮೇಲಿನ ಸೆಸ್ ಶೇ. ೨ ರಷ್ಟು ಕುಸಿದಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ. ದೇಶದಲ್ಲಿ ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಅದೇ ರೀತಿ ರಾಜ್ಯಗಳಿಗೆ ಮರಳಿ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.