ಜಿಎಸ್‌ಟಿ ಏರಿಕೆ ಖಂಡಿಸಿ ಪ್ರತಿಭಟನೆ

ಮಾಲೂರು,ಜು೨೧: ಜನಸಾಮಾನ್ಯರು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಮೇಲೆ ತೆರಿಗೆ(ಜಿ.ಎಸ್.ಟ) ಏರಿಕೆ ಮಾಡಿರುವುದುನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಶಿರಸ್ತೇದಾರ್ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಶಿವಾರ ನಾರಾಯಣಸ್ವಾಮಿ ಮಾತನಾಡಿ ಪ್ರಸ್ತುತ ಆಡಳಿತ ನಡೆಸುವ ಕೇಂದ್ರ ಸರ್ಕಾರವು ದಿನಬಳಕೆ ಮತ್ತು ಔಷಧಿಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಬಡವರ ಹೊಟ್ಟೆ ಮೇಲೆ ಬರೆ ಎಳೆಯುವಂತಹ ಸರ್ಕಾರವಾಗಿದೆ, ಪ್ರತಿದಿನ ಬಳಸುವ ದಿನಸಿ ಪದಾರ್ಥಗಳು ಮತ್ತು ಗ್ಯಾಸ್ ಸಿಲೆಂಡರ್‌ಗಳು, ಪೆಟ್ರೋಲ್ ಡಿಸೇಲ್, ಬೆಲೆ ಏರಿಕೆ ಮಾಡಿರುತ್ತಾರೆ, ಜನಸಾಮಾನ್ಯರು ಪ್ರತಿದಿನವೂ ಒಂದಲ್ಲ ಒಂದು ರೀತಿ ಜನರು ಕಷ್ಟಗಳಿಗೆ ಸಿಲುಕಿಕೊಂಡಿದ್ದಾರೆ. ೩ವರ್ಷಗಳಿಂದ ಕೋವಿಡ್‌ನಿಂದ ಜನರು ಜೀವನ ಸಾಗಿಸಲು ತುಂಬಾ ಕಷ್ಟಕರವಾಗಿದ್ದು,
ಜನ ಸಾಮಾನ್ಯರಿಗೆ ಸರ್ಕಾರಗಳು ಜಿಎಸ್‌ಟಿ ದರ ಏರಿಸುವ ಮೂಲಕ ಮತ್ತೊಂದು ಹೊಡೆತ ನೀಡಿರುತ್ತಾರೆ, ಈಗಾದರೆ ಸಾಮಾನ್ಯರು ಜನಜೀವನ ಸಂಕಷ್ಟಕ್ಕೆ ಸಿಲುಕಲಿದೆ, ಅದರಿಂದಾಗಿ ಸರ್ಕಾರ ಜಿ.ಎಸ್.ಟಿ ಏರಿಕೆ ಹಿಂಪಡೆದು ದೇಶದ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ದಯಾನಂದ್, ಪಧಾದಿಕಾರಿಗಳಾದ ಅಮರಾವತಿ, ಕೆಂಪನಹಳ್ಳಿ ರವಿ, ಚಲಪತಿ, ನಾಗರಾಜ್, ಮಂಜುನಾಥ್, ಚಿರಂಜೀವಿ, ಸುರೇಶ್ ರೆಡ್ಡಿ, ರಮೇಶ್, ಸುಧಾಕರ್ ಗೌಡ, ದ್ರಾಕ್ಷಾಯಣಿ, ಸುಬ್ರಮಣಿ, ಮಿಥುನ್, ಆಟೋ ರಮೇಶ್, ಅಮರ್, ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.