ಜಿಎಸ್ಟಿಯಿಂದ ಬಡ ಕಾರ್ಮಿಕರು ಬದುಕು ತತ್ತರ – ಡಾ.ಜನಾರ್ಧನ್.


ಕೂಡ್ಲಿಗಿ.ಜು. 31 :- ಭಾರತದ ಆರ್ಥಿಕ ಪರಿಸ್ಥಿತಿಯಿಂದ ರೈತ ಮತ್ತು ಕಾರ್ಮಿಕರ ಬದುಕು ದುಸ್ಥಿತಿಗೆ ಬಂದಿದೆ  ಒಂದು ಕಡೆ ಜಿಎಸ್‌ಟಿಯಿಂದ ಜನರು ತತ್ತರಿಸಿ ಹೋಗಿದ್ದು ಮತ್ತೊಂದು ಕಡೆ ಜಾತಿ ವ್ಯವಸ್ಥೆಯಲ್ಲಿ ಕೊಲೆಸುಲಿಗೆ  ನಡೆಯುತ್ತಿದ್ದು ಇಡೀ ದೇಶದ ಜನತೆಯೇ  ಭಯದ ಭೀತಿಯಲ್ಲಿ ಬದುಕುತ್ತಿದ್ದಾರೆ ಇದರ ಮಧ್ಯೆ  ಒಂದು ಕಡೆ ಅತಿವೃಷ್ಟಿ ಮಳೆ ಭೂಕಂಪ ಪ್ರವಾಹ  ತಾಂಡವವಾಡುತ್ತಿದ್ದು ಮಧ್ಯಮ ವರ್ಗ ಹಾಗೂ ಕೂಲಿಕಾರರು, ಬಡವರು ಬಲಿಯಾಗುತ್ತಿದ್ದಾರೆ ಎಂದು ಸಿಪಿಐ ಪಕ್ಷದ ರಾಜ್ಯ ಸಹಕಾರ್ಯದರ್ಶಿ ಡಾ.ಜನಾರ್ಧನ್ ತಿಳಿಸಿದರು.
ಅವರು   ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಶನಿವಾರ ನಡೆದ ಸಿಪಿಐ ಪಕ್ಷದ ತಾಲೂಕು ಮಟ್ಟದ ಆರನೇ ಸಮ್ಮೇಳನದ ಕಾರ್ಯಕ್ರಮವನ್ನು  ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ  ಸರ್ಕಾರದ  ಸಂಪತ್ತನ್ನ ಖಾಸಗೀಕರಣ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ನೆಮ್ಮದಿಯನ್ನೇ ಹಾಳುಮಾಡುವಲ್ಲಿ ಹೊರಟಿವೆ ಅಲ್ಲದೆ  ಅಂದು ದೇಶದ  ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದರೆ  ಇಂದು ನಮ್ಮಗಳ ಸ್ವತಂತ್ರಕ್ಕೆ  ಹೋರಾಟ ನಡೆಯಬೇಕಾಗಿದೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಪೀಳಿಗೆ  ಆತಂಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಸಹ ಸರ್ಕಾರವು ತಮಗಿಷ್ಟದಂತೆ ಮಾರ್ಪಡಿಸುತ್ತಿರುವುದು ವಿಷಾದನೀಯ,  ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಯಾವ ಸರ್ಕಾರವು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೆ ತಮ್ಮ ವೈಯಕ್ತಿಕ ಕಿತ್ತಾಟಗಳಲ್ಲಿ ತೊಡಗಿದೆ ಇಂಥ ಪರಿಸ್ಥಿತಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ ಮತ್ತು  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತ ಕಮ್ಯುನಿಸ್ಟ್  ಪಕ್ಷದ ಅಭ್ಯರ್ಥಿಯನ್ನಾಗಿ ಹೆಚ್  ವೀರಣ್ಣ ಅವರನ್ನು ಸಿಪಿಐ ಪಕ್ಷದ ಅಭ್ಯರ್ಥಿಯನ್ನಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಸಹ ಈಗಾಗಲೇ ತೀರ್ಮಾನಿಸಿದೆ.  ಕೂಡ್ಲಿಗಿಯ ಅಭಿವೃದ್ಧಿಗಾಗಿ ಸ್ಥಳೀಯ ಅಭ್ಯರ್ಥಿಯನ್ನಾಗಿ ತಾವೆಲ್ಲರೂ ಅಭ್ಯರ್ಥಿ ಪರವಾಗಿ ಮತ ನೀಡಲು ತಾಲೂಕಿನ ಎಲ್ಲಾ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಾಗುತ್ತದೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
 ಇದೇ ಸಂದರ್ಭದಲ್ಲಿ ಮುಂದಿನ ಮೂರುವರ್ಷಕ್ಕೆ ತಾಲೂಕು ಸಿಪಿಐ ಪಕ್ಷದ ನೂತನ ಕಾರ್ಯದರ್ಶಿಯಾಗಿ ಮೊರಬ ಗ್ರಾಮಪಂಚಾಯಿತಿ ಸದಸ್ಯ ಹಾಗೂ ತಾಲೂಕು ಸಂಘಟನೆಯ ಹಿರಿಯರಲ್ಲಿ ಒಬ್ಬರಾಗಿದ್ದ ಕರಿಯಪ್ಪ ಅವರನ್ನು ನೂತನ ಕಾರ್ಯದರ್ಶಿಯಾಗಿ ಸಿಪಿಐ ಪಕ್ಷದ  ಸರ್ವಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಆಯ್ಕೆಮಾಡಲಾಯಿತು.
 ಖಜಾಂಚಿಯಾಗಿ ಯು.ಪೆನ್ನಪ್ಪ ಆಯ್ಕೆಯಾಗಿದ್ದು ಸಹಕಾರ್ಯದರ್ಶಿಗಳಾಗಿ ಮಂಜು ಗುಡೆಕೋಟೆ ಅಶೋಕ್ ನಾಯಕ್ ಗ್ರಾಮ ಪಂಚಾಯತಿ ಸದಸ್ಯರು, ಚಿಕ್ಕ ಜೋಗಿಹಳ್ಳಿ ವೈ.ಮಲ್ಲಿಕಾರ್ಜುನ,  ಹುಲಿಕುಂಟೆ ಹೆಚ್  ಪಾಲಮ್ಮ ತೃತೀಯಲಿಂಗಿ,  ಎರ್ರಓಬಯ್ಯನಹಟ್ಟಿ. 30 ಜನ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವಿಜಯನಗರ ಜಿಲ್ಲಾ ಉಸ್ತುವಾರಿಗಳಾದ ಆದಿ ಮೂರ್ತಿ,  ಹೆಚ್ ವೀರಣ್ಣ ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ. ಗುಡಿಹಳ್ಳಿ ಹಾಲೇಶ್, ಜಿಲ್ಲಾಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ ಹಲಗಿ ಸುರೇಶ್ ಕಾರ್ಯದರ್ಶಿಗಳು ಸಿಪಿಐ ಪಕ್ಷ ಹೂವಿನಹಡಗಲಿ,  ರೇಣುಕಮ್ಮ ಜಿಲ್ಲಾಧ್ಯಕ್ಷರು ದೇವದಾಸಿ ಸಂಘಟನೆ,  ಮಹಂತಮ್ಮ ಅಧ್ಯಕ್ಷರು ಅಂಗನವಾಡಿ ಸಂಘಟನೆ,  ಸುಜಾತ ಅಧ್ಯಕ್ಷರು ಬಿಸಿಊಟ ಸಂಘಟನೆ, ಮಾದೇವಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚೌಡಾಪುರ,  ಬಸವರಾಜ ಗ್ರಾಮ ಪಂಚಾಯತಿ ಸದಸ್ಯರು ಮಲ್ಲಾಪುರ, ಶರಣಪ್ಪ ಗ್ರಾಮ ಪಂಚಾಯತಿ ಸದಸ್ಯರು ಕರಡಿಹಳ್ಳಿ,  ಬಿ ಪ್ರಕಾಶ ಸಹಕಾರ್ಯದರ್ಶಿ ಕಟ್ಟಡ ಕಾರ್ಮಿಕರ ಸಂಘ,  ಅನಂತೇಶ. ಸಂಚಾಲಕರು, ನಾಗರಾಜ್ ಅಖಿಲ ಭಾರತ ಕಿಸಾನ್ ಸಭಾ ಕಾರ್ಯದರ್ಶಿಗಳು,  ಬಸವರಾಜ್ ಜಿಎಸ್ ಅಖಿಲ ಭಾರತ ಯುವಜನ. ಕಾರ್ಯದರ್ಶಿಗಳು,  ಪಾಲಯ್ಯ ಪ್ರಭಾಕರ ಓಬಳೇಶ್ ತಿಪ್ಪೇಸ್ವಾಮಿ ಕರಿಯಪ್ಪ ಚೌಡಪ್ಪ ಲೋಕೇಶ್ ಬಾಬು ಹೇಮಣ್ಣ ಸಿದ್ದಪ್ಪ ಶ್ರೀನಿವಾಸ್ ಮಂಜಮ್ಮ ನೀಲಗಂಗಮ್ಮ ಸೋಮಕ್ಕ ಚಿತ್ತಣ್ಣ ಖಜಾಂಚಿ ಕಿಸಾನ್ ಸಭಾ ನೂರಾರು ಕಾರ್ಯಕರ್ತ ಉಪಸ್ಥಿತರಿದ್ದರು.