ಜಿಎಮ್ ಲ್ಯಾಂಡ್ ಡೆವಲಪರ್ಸ್ ಉದ್ಘಾಟನೆ. ಕೈಗೆಟಕುವ ದರದಲ್ಲಿ ಫ್ಲಾಟಗಳು ಲಭ್ಯ : ಗಜಾನನ ಮಂಗಸೂಳಿ

ಅಥಣಿ :ನ.19: ಸುಮಾರು ನಾಲ್ಕು ದಶಕಗಳ ಹಿಂದೆ ನಮ್ಮ ಕುಟುಂಬಸ್ಥರಿಂದ 1982 ರಲ್ಲಿ ಪಟ್ಟಣದ ಶಂಕರ ನಗರದಲ್ಲಿ ಬಡಾವಣೆ ನಿರ್ಮಿಸಿ ಆ ಬಡಾವಣಿಗೆ ಶಂಕರ್ ನಗರ ಎಂದು ನಾಮಕರಣ ಮಾಡುವುದರ ಮೂಲಕ ನಾಲ್ಕು ದಶಕಗಳಿಂದ ಲ್ಯಾಂಡ್ ಡೆವಲಪರ್ ರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ ಎಂದು ಜಿಎಂ ಲ್ಯಾಂಡ್ ಡೆವಲಪರ್ಸ್ ಸಂಸ್ಥಾಪಕ ಗಜಾನನ ಮಂಗಸೂಳಿ ಹೇಳಿದರು..
ಅವರು ಪಟ್ಟಣದಲ್ಲಿ ಜಿ.ಎಮ್. ಲ್ಯಾಂಡ್ ಡೆವಲಪರ್ಸ್ ಕಚೇರಿ, ಉದ್ಘಾಟಿಸಿ ಮಾತನಾಡುತ್ತಿದ್ದರು, ಅಥಣಿ ಹಾಗೂ ಕಾಗವಾಡ ತಾಲೂಕಿನ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಫ್ಲಾಟ್ ಗಳನ್ನು ನೀಡುವುದರ ಜೊತೆಗೆ ಪ್ಲಾಟ್ ಹೊಲ, ಮನೆ ಖರೀದಿ ಅಥವಾ ಮಾರಾಟಕ್ಕಾಗಿ ಬಡಾವಣೆಗಳ ಎನ್ ಎ, ಕೆಜಿಪಿ ಗಾಗಿ ಬಡಾವಣೆಗಳ ರಸ್ತೆ, ಚರಂಡಿ, ಬೀದಿ ದೀಪ, ಮತ್ತು ಉದ್ಯಾನವನ ಅಭಿವೃದ್ಧಿ ಪಡಿಸುವುದರ ಜೊತೆಗೆ ಎಲ್ಲಾ ಸೌಲಭ್ಯವುಳ್ಳ ಸುಂದರ ಬಡಾವಣೆಗಳನ್ನು ನಿರ್ಮಿಸಲಾಗಿದೆ ಒಮ್ಮೆ ಬಂದು ಕಚೇರಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು
ಇದೆ ಸಂದರ್ಭದಲ್ಲಿ ಶಾಸಕ ರಾಜು ಕಾಗೆ, ಚಿದಾನಂದ ಸವದಿ , ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಆರ್ ಎಸ್ ಎಸ್ ಮುಖಂಡರಾದ ಅರವಿಂದರಾವ ದೇಶಪಾಂಡೆ, ಆರ್. ಎಮ್. ಡಾಂಗೆ, ರಾವಸಾಬ ಐಹೋಳೆ, ಶಿವು ಗುಡ್ಡಾಪೂರ, ಗಿರೀಶ ಬುಟಾಳಿ, ಸಂತೋಷ ಬೂಮ್ಮನ್ನವರ, ರಿಯಾಜ ಸನದಿ ,ರಾಮನಗೌಡ ಪಾಟೀಲ, ಸೈಯದ್ ಗಡ್ಡೇಕರ, ಸುರೇಶ ಬಳ್ಳೊಳ್ಳಿ ,ಬಸವರಾಜ ಹಳ್ಳದಮಳ, ಉಮರ ಸೈಯದ್, ರಾಹುಲ ಮಂಗಸೂಳಿ, ಅಥಣಿಯ ಖ್ಯಾತ ವೈದ್ಯರು ಹಾಗೂ , ಹಿರಿಯ ಮುಖಂಡರು ಗಣ್ಯಮಾನ್ಯರು ಪುರಸಭೆ ಸದಸ್ಯರು ಅಭಿಮಾನಿಗಳು ಅನೇಕರು ಉಪಸ್ಥಿತರಿದ್ದರು