ಜಿಎನ್ ಡಿ ಗಲಾಟೆ ಕ್ರಮಕ್ಕೆ ಬಿಜೆಪಿ ಗಡುವು

ಬೀದರ್:ಮೇ.31: ಗುರುನಾನಕ ದೇವ( ಜಿಎನ್ ಡಿ) ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೈ ಶ್ರೀರಾಮ ಹಾಡು ಹಾಕಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ದಾಳಿ ಮಾಡಿ, ಕೆಲವರಿಗೆ ಗಾಯಗೊಳಿಸಿ ಭಯಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ತೀವ್ರ ಖಂಡನೀಯ. ಕೂಡಲೇ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಎಚ್ಚೆತ್ತುಕೊಂಡು ಧರ್ಮದ ಹೆಸರಿನಲ್ಲಿ ದಾಂಧಲೆ ಮಾಡಿದ ಎಲ್ಲರಿಗೂ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡುಗಿ ಆಗ್ರಹಿಸಿದ್ದಾರೆ.
ಜಿಎನ್ ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಹೇಯ ಹಾಗೂ ನೀಚ ಮನಸ್ಥಿತಿಯಿಂದ ಕೂಡಿದೆ. ಜೈ ಶ್ರೀರಾಮ ಹಾಡು ಹಾಕಿದ್ದಕ್ಕಾಗಿ ಈ ಪರಿ ಗಲಾಟೆ, ದಾಳಿ ಮಾಡಿ ವಿದ್ಯಾರ್ಥಿಗಳಿಗೆ ಥಳಿಸಿರುವುದು ಜಿಹಾದಿ ಸಂಸ್ಕøತಿಯ ಪ್ರತೀಕವಾಗಿದೆ. ವಿದ್ಯಾರ್ಥಿಗಳಲ್ಲಿ ಈ ತರಹದ ಮನೋಭಾವ ಬೆಳೆದಿರುವುದು ಆತಂಕಕಾರಿ ವಿಷಯ. ಇದು ಸಮಾಜದ ಶಾಂತಿ, ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ, ಜಿಲ್ಲಾಡಳಿತ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಗುರುವಾರ ಇಲ್ಲಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಮುಸ್ಲಿಂ ಯುವಕರು ಗುಂಪು ಕಟ್ಟಿಕೊಂಡು ಹಲ್ಲೆ, ದಾಳಿಗೆ ಮುಂದಾಗುವುದು ನೋಡಿದರೆ ಇವರಿಗೆ ರಾಜ್ಯ ಸರ್ಕಾರದ ಅಂಜಿಕೆ ಇಲ್ಲ, ಬದಲಾಗಿ ಸರ್ಕಾರದ ಪೆÇ್ರೀತ್ಸಾಹ, ಉತ್ತೇಜನ ಸಿಗುತ್ತಿರುವಂತೆ ಕಾಣಿತ್ತಿದೆ. ಬೆಂಗಳೂರಿನಲ್ಲಿ ಹನುಮಾನ ಚಾಲೀಸಾ ಹಾಡು ಹಾಕಿದ್ದಕ್ಕೆ ಹಲ್ಲೆ ಮಾಡಲಾಗಿತ್ತು. ಇಲ್ಲಿ ಜೈ ಶ್ರೀರಾಮ ಹಾಡು
ಹಾಕಿದ್ದಕ್ಕೆ ಹಲ್ಲೆಯಾಗಿದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಇಷ್ಟಾದರೂ ಸರ್ಕಾರ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕೈಚೆಲ್ಲಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಎನ್ ಡಿ ಕಾಲೇಜಿನಲ್ಲಿ ನಡೆದ ಹಲ್ಲೆಯಿಂದ ಹಿಂದು ಸಮಾಜದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಕುರಿತು ಗಾಯಾಳುಗಳು ಪೆÇಲೀಸರಿಗೆ ದೂರು ನೀಡಿದ್ದಾರೆ. ವಾಸ್ತವ ಏನಿದೆ ಎಂಬುದು ಸಹ ವಿವರಿಸಿದ್ದಾರೆ. ಆದರೂ ನಂತರ ಪೆÇಲೀಸರು ವಿನಾಕಾರಣ ಹಲ್ಲೆಗೊಳಗಾದ ಏಳೆಂಟು ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ. ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ಹಿಂದು ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಸಚಿವರ ಒತ್ತಡಕ್ಕೆ ಒಳಗಾಗಿ ಹಲ್ಲೆಗೊಳಗಾದ ಅಮಾಯಕರ ಮೇಲೂ ಪ್ರಕರಣ ಹಾಕಿದೆ. ಕೂಡಲೇ ಈ ಸುಳ್ಳು ಕೇಸ್ ವಾಪಸ್ ಪಡೆಯಬೇಕು. ನಾಳೆಯೊಳಗೆ ಎಲ್ಲ ಸುಳ್ಳು ಕೇಸ್ ಹಿಂಪಡೆದು ಎಲ್ಲ ತಪ್ಪಿತಸ್ಥರನ್ನು ಬಂಧಿಸಿ ಅವರ ವಿರುದ್ಧ ಧರ್ಮದ್ರೋಹ, ಸಮಾಜದಲ್ಲಿ ಅಶಾಂತಿ, ಕೋಮು ಗಲಭೆ ಸೃಷ್ಟಿಸುವ ಕಾಯ್ದೆಯಡಿ ಕೇಸ್ ದಾಖಲಿಸಬೇಕು. ನಾಳೆಯೊಳಗೆ ಈ ದಿಸೆಯಲ್ಲಿ ಕ್ರಮ ಜರುಗದಿದ್ದರೆ ಶನಿವಾರ ದಿನಾಂಕ ಜೂನ್ ಒಂದರಂದು (01-06-2024)ಪಕ್ಷದಿಂದ ನಗರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಸೋಮನಾಥ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ರೌಡಿಗಳಿಗಿಲ್ಲ ಪೆÇಲೀಸರ ಭಯ
ಕಿಡಿಗೇಡಿಗಳಿಗೆ, ಸಮಾಜಘಾತುಕರಿಗೆ, ರೌಡಿಗಳಿಗೆ ರಾಜ್ಯ ಸರ್ಕಾರ, ಪೆÇಲೀಸರು, ಕಾನೂನಿನ ಭಯವೇ ಇಲ್ಲದಂತಾಗಿದೆ. ಇದಕ್ಕೆ ರೌಡಿಶೀಟರ್ ರಸೂಲ್ ಫಕೀರ್ ಎಂಬಾತ ಬೀದರ್ ನ್ಯೂಟೌನ್ ಪೆÇಲೀಸ್ ಠಾಣೆಯ ಸಿಪಿಐ ಸಂತೋಷ ತಟ್ಟೆಪಲ್ಲಿ ಅವರಿಗೆ ಚಾಕು ಇರಿದು, ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯೇ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಕಿಡಿಕಾರಿದ್ದಾರೆ.
ರೌಡಿಶೀಟರ್ ರಸೂಲ್ ಈ ಹಿಂದೆ ಹಲವು ದುಷ್ಕ್ರತ್ಯ ನಡೆಸಿದ್ದಾನೆ. ಬ್ರಿಮ್ಸ್ ಆಸ್ಪತ್ರೆಯ ಬಳಿ ಸಾರ್ವಜನಿಕರ ಜೊತೆಗೆ ಕಿರಿಕ್ ಮಾಡುತ್ತಿದ್ದ ಈತನಿಗೆ ಬಂಧಿಸಲಾಗಿದೆ. ಚಿಕಿತ್ಸೆಗಾಗಿ ಬುಧವಾರ ತಡರಾತ್ರಿ ಆಸ್ಪತ್ರೆಗೆ ಒಯ್ಯುವಾಗ ಮಾರ್ಗ ಮಧ್ಯೆ ಈತನು ಪೆÇಲೀಸರ ಮೇಲೆಯೇ ಎರಗಿದ್ದಾನೆ. ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕೂವಿನಿಂದ ಸಿಪಿಐ ಸಂತೋಷ ಅವರ ಮೇಲೆ ದಾಳಿ ಮಾಡಿ ಓಡಿಹೋಗಲು ಯತ್ನಿಸಿದ್ದಾನೆ. ದಾಳಿಯಲ್ಲಿ ಸಿಪಿಐ ಸಂತೋಷ ಅವರ ಕೈ, ತಲೆ ಇತರೆಡೆ ಗಾಯವಾಗಿವೆ. ದಾಳಿ ಹಿನ್ನೆಲೆಯಲ್ಲಿ ಸಿಪಿಐ ಸಂತೋಷ ಅವರು ಆತ್ಮರಕ್ಷಣೆಗಾಗಿ ಸರ್ವಿಸ್ ರಿವಾಲ್ವರ್ ನಿಂದ ರಸೂಲ್ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಪೆÇಲೀಸ್ ಅಧಿಕಾರಿಗಳನ್ನು ಬಿಡದೆ ಅವರ ಮೇಲೆ ಚಾಕು ಇರಿತ ಮಾಡುವ ದುಸ್ಸಾಹಾಸ ರೌಡಿಶೀಟರ್ ಗಳು ಮಾಡುತ್ತಿರುವುದು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಸತ್ತು ಹೋದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಆಡಳಿತ ವ್ಯವಸ್ಥೆಯೇ ಹಳಿ ತಪ್ಪಿದೆ. ಸರ್ಕಾರಿ ಯಂತ್ರವೇ ನಿಷ್ಕ್ರಿಯವಾಗಿದೆ. ಗೂಂಡಾಗಳು, ರೌಡಿಶೀಟರ್ ಗಳು ಬಿಂದಾಸ್ ಬೀದಿಗಿಳಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಹಿಂದು ಸಮಾಜಕ್ಕೆ ಅವಮಾನಿಸುವ, ಸಮಾಜ ಮುಖಂಡರ ವಿರುದ್ಧ ಪಿತೂರಿ ರೂಪಿಸುವ ಕೆಲಸಗಳು ನಡೆದಿವೆ. ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಹಲ್ಲೆ, ದಾಳಿ, ದೌರ್ಜನ್ಯ, ದಬ್ಬಾಳಿಕೆ ನಡೆಸಲಾಗುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ತುಷ್ಠೀಕರಣ ರಾಜಕೀಯವೇ ಕಾರಣವಾಗಿದೆ. ಒಂದು ಸಮುದಾಯಕ್ಕೆ ಸುಣ್ಣ, ಮತ್ತೊಂದು ಸಮುದಾಯಕ್ಕೆ ಬೆಣ್ಣೆ ಎಂಬ ಧೋರಣೆ ತಳೆದಿದ್ದು ಆತಂಕಕಾರಿ. ಪೆÇಲೀಸ್ ಅಧಿಕಾರಿಗಳಿಗೇ ಕಿಡಿಗೇಡಿಗಳು ಚಾಕು ಇರಿಯುವ ಹಂತಕ್ಕೆ ಬಂದಿದ್ದಾರೆ ಎಂದರೆ ಪರಿಸ್ಥಿತಿ ಯಾವ ಪರಿ ಹದಗೆಟ್ಟಿದೆ ಎಂಬುದು ಸಾಬೀತುಪಡಿಸಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ದುಷ್ಟರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಆಗ್ರಹಿಸಿದ್ದಾರೆ.