ಜಿಎನ್‍ಡಿ ಕಾಲೇಜಿನ ಪ್ರೇಮಲಾಗೆ ಪಿಎಚ್‍ಡಿ ಪದವಿ

ಬೀದರ್: ಎ.7:ನಗರದ ಪ್ರತಿಷ್ಠಿತ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಲಾ ಬಂಡೆ ಅವರು ಪಿಎಚ್‍ಡಿ ಪದವಿ ಪಡೆದಿದ್ದಾರೆ.

ಇಂಪ್ರೂವಿಂಗ್ ನೆಟ್‍ವರ್ಕ್ ಲೈಫ್ ಟೈಮ್ ಆ್ಯಂಡ್ ಪರಫಾರ್ಮೆನ್ಸ್ ಮೆಟ್ರಿಕ್ಸ್ ಬೈ ಮಿನಿಮೈಜಿಂಗ್ ಕ್ರಾಸ್ ಲೇಯರ್ ಅಟ್ಯಾಕ್ಸ್ ಕುರಿತ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದ 20 ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು.

ಪ್ರೊ. ಪ್ರೇಮಲಾ ಅವರು ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಪ್ರಾದ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾಗಿರುವ ಡಾ. ಮೊಹಮ್ಮದ್ ಬಖರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.

ಡಾಕ್ಟರೇಟ್ ಪಡೆದಿರುವ ಪ್ರೊ. ಪ್ರೇಮಲಾ ಅವರನ್ನು ಜಿಎನ್‍ಡಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್. ಬಲಬೀರಸಿಂಗ್, ಕಾಲೇಜಿನ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ್, ನಿರ್ದೇಶಕ ಡಾ. ಬಿ.ಎಸ್. ಧಾಲಿವಾಲ್, ಕಾಲೇಜಿನ ಪ್ರಾಚಾರ್ಯ ಡಾ. ರವೀಂದ್ರ ಎಕಲಾರಕರ್ ಮತ್ತು ಅಧ್ಯಾಪಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.