ಜಿಎನ್‌ಆರ್ ಫೌಂಡೇಷನ್ : ಶಿಕ್ಷಕರಿಗೆ ಆಹಾರ ಕಿಟ್ – ಶ್ಲಾಘನೆ


ರಾಯಚೂರು.ಜೂ.೦೧- ಮುನ್ನೂರುಕಾಪು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ೪೫ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಇಂದು ಗುಡ್ಸಿ ನರಸರೆಡ್ಡಿ (ಜಿಎನ್‌ಆರ್) ಇವರು ತಮ್ಮದೇಯಾದ ಜಿಎನ್‌ಆರ್ ಫೌಂಡೇಷನ್ ವತಿಯಿಂದ ಇಂದು ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುನ್ನೂರುಕಾಪು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ನೆರವು ನೀಡುವುದು ಅತ್ಯಂತ ಅಗತ್ಯವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ನಡೆಯದಿರುವುದರಿಂದ ಅವರಿಗೆ ವೇತನ ದೊರೆಯುತ್ತಿಲ್ಲ. ಅವರ ಜೀವನ ನಿರ್ವಹಣೆ ಅತ್ಯಂತ ಕಷ್ಟದಾಯಕವಾಗಿದೆ. ಜಿಎನ್‌ಆರ್ ಫೌಂಡೇಷನ್ ವತಿಯಿಂದ ಈ ಕಿಟ್ ನೀಡುತ್ತಿರುವುದು ಅತ್ಯಂತ ಉತ್ತಮ ಕಾರ್ಯವಾಗಿದೆ. ವಿವಿಧ ಸಂಘ-ಸಂಸ್ಥೆಗಳು ಎಲ್ಲಾರಿಗೂ ಸಹ ದಿನಸುಗಳ ನೆರವು ನೀಡುತ್ತಿದ್ದಾರೆ. ಆದರೆ, ಶಿಕ್ಷಕರು ಸಹ ದಿನಸುಗಳನ್ನು ಒದಗಿಸುವಂತಾಗಲಿ ಎಂದು ಅವರು ಹೇಳಿದರು.
ನಂತರ ನರಸರೆಡ್ಡಿ ಮಾತನಾಡಿ. ಶಾಲೆ ಶಿಕ್ಷಕರು ಕೆಳದ ಒಂದು ವರ್ಷದಿಂದ ಕೊರೋನಾ ಸಂಕಷ್ಟ ದಿಂದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅದಕ್ಕಾಗಿ ಪಾಪರೆಡ್ಡಿ ನೇತೃತ್ವದ, ಜಿಎನ್‌ಆರ್ ಫೌಂಡೇಶನ್ ನರಸರೆಡ್ಡಿ ವತಿಯಿಂದ ಶಾಲೆ ಶಿಕ್ಷಕರಿಗೆ ಆಹಾರ ಕಿಟ್ಟುಗಳನ್ನು ನೀಡಲಾಗುತ್ತಿದೆ
ಎಂದರು. ಮುನ್ನೂರು ಶಾಲೆಯಿಂದ ಸುಮಾರು ೨೦೦ಕ್ಕೂ ಹೆಚ್ಚು ಖಾಸಗಿ ಶಿಕ್ಷಕರಿಗೆ ಆಹಾರ ಕಿಟ್ಟು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಯನ ಸುದರ್ಶನ್ ರೆಡ್ಡಿ,ಮಾಜಿ ನಗರಸಭೆ ಸದಸ್ಯ ಟಿ. ಮಲ್ಲೇಶ್,ನಿಂಬೆಕಾಯಿ ಸತ್ಯ ರೆಡ್ಡಿ, ವೇಲೂರ್ ವೀರೇಶ್ ರೆಡ್ಡಿ , , ಅಶೋಕ್ ರೆಡ್ಡಿ ,ಶರಣಗೌಡ, ಅರುಣ್ ರೆಡ್ಡಿ, ನಿತಿನ್ ರೆಡ್ಡಿ ,ಬಿ ಕೆ ವೆಂಕಟೇಶ್ ,ನರಸಿಂಹ, ನವೀನ್, ಹಾಲ್ವಿ ಶ್ರೀನಿವಾಸ್, ರಾಘವೇಂದ್ರ ಕುಲಕರ್ಣಿ ಅಲ್ತಾಫ್ ಹುಸೇನ್, ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಎನ್‌ಆರ್ ಫೌಂಡೇಷನ್ ಮುಖ್ಯಸ್ಥರಾದ ಗುಡ್ಸಿ ನರಸರೆಡ್ಡಿ, ಟಿ.ಮಲ್ಲೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.