ಜಿಎನ್‌ಆರ್ ಫೌಂಡೇಷನ್ – ಕಿಟ್ ವಿತರಣೆ

ರಾಯಚೂರು.ಜೂ.೦೯- ಜಿಎನ್‌ಆರ್ ಫೌಂಡೇಷನ್ ವತಿಯಿಂದ ಇಂದು ನಗರದಲ್ಲಿ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ರಜಿಪೂತ್ ಸಮುದಾಯದ ಗುರುಕುಲ ಶಾಲೆಯ ಶಿಕ್ಷಕರಿಗೆ ಇವುಗಳನ್ನು ವಿತರಿಸಲಾಯಿತು. ಗುಡ್ಸಿ ನರಸರೆಡ್ಡಿ ಅವರ ನೇತೃತ್ವದಲ್ಲಿ ಈ ಕಿಟ್ ವಿತರಿಸಲಾಯಿತು.
ಕಿಟ್ ವಿತರಣೆ ಸಂದರ್ಭದಲ್ಲಿ ಪತ್ರಕರ್ತರಾದ ವೆಂಕಟಸಿಂಗ್ ಕಿಟ್ ನೀಡಿದರು. ನಂತರ ಗುಡ್ಸಿ ನರಸರೆಡ್ಡಿ ಅವರು ಮಾತನಾಡುತ್ತಾ, ಶಿಕ್ಷಕರು ದೇವರ ಸಮಾನ. ಅವರ ಸೇವೆ ಮಹತ್ವದ್ದಾಗಿದೆ. ಆರೋಗ್ಯ ಪೂರ್ಣ ಸಮಾಜಕ್ಕಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ ಡೌನ್‌ನಿಂದ ಅವರ ಸಂಕಷ್ಟ ನಿವಾರಣೆಗೆ ಫೌಂಡೇಷನ್ ಈ ಕರ್ತವ್ಯ ನಿರ್ವಹಿಸುತ್ತಿದೆಂದು ಹೇಳಿದರು.