ಜಿಎನ್‌ಆರ್ ಫೌಂಡೇಷನ್ – ಅರ್ಚಕರಿಗೆ ನೆರವು

ರಾಯಚೂರು.ಜೂ.೦೩- ಜಿಎನ್‌ಆರ್ ಫೌಂಡೇಷನ್ ವತಿಯಿಂದ ಇಂದು ನಗರದ ನಂದೀಶ್ವರ ದೇವಸ್ಥಾನದಲ್ಲಿ ಅರ್ಚಕರಿಗೆ ಅಗತ್ಯ ದಿನಸುಗಳನ್ನು ವಿತರಿಸಲಾಯತು.
ಜಿಎನ್‌ಆರ್ ಫೌಂಡೇಷನ್ ಮುಖ್ಯಸ್ಥರಾದ ಗುಡ್ಸಿ ನರಸರೆಡ್ಡಿ ಅವರು, ಅರ್ಚಕರಿಗೆ ದಿನಸು ವಿತರಿಸಿದರು. ಅರ್ಚಕರು ದಿನ ನಿತ್ಯ ದೇವರ ಪೂಜೆ ಮಾಡುವ ಮೂಲಕ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸುತ್ತಾರೆ. ಇವರ ಲಾಕ್ ಡೌನ್‌ನಲ್ಲಿ ಸಂಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರ್ಚಕರಿಗೆ ನೆರವಾಗಲೆಂದು ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಚಕರು ಮಾತನಾಡುತ್ತಾ, ಗುಡ್ಸಿ ನರಸರೆಡ್ಡಿ ಅವರ ಈ ನೆರವು ಅರ್ಚಕರಿಗೆ ತುಂಬಾ ಅನುಕೂಲವಾಗಿದೆ. ಇದರಿಂದ ಅರ್ಚಕ ಸಮುದಾಯ ಸಂತೃಷ್ಟರಾಗಿರುವುದಾಗಿ ಹೇಳಿದರು.