ಜಿಎನ್‍ಡಿಇಸಿ: ಕೃತಕ ಬುದ್ಧಿಮತ್ತೆ ಕುರಿತು ಕಾರ್ಯಾಗಾರ

ಬೀದರ್ ಜೂ 18: ನಗರದ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಎಐ ಮತ್ತು ಎಂ ಎಲ್ ವಿಭಾಗ ಮತ್ತು ಇಸಿಲಿ -ಟೆಕ್ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆಯ ನೈತಿಕತೆ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಯಿತು.
ಕಾರ್ಯಾಗಾರವು ಇತ್ತೀಚಿನ ತಂತ್ರಜ್ಞಾನಗಳ ಪ್ರಗತಿ, ಸವಾಲುಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ ಮತ್ತು ಎಐಕ್ಷೇತ್ರದಲ್ಲಿನ ಅನ್ವಯಗಳು ಡೇಟಾ ಸೈನ್ಸ್ ಬಳಸಿ ಎಂ.ಎಲ್. ಕಾರ್ಯವನ್ನು ಹೊಂದಿದೆ.
ಇಂಜಿನಿಯರ್ ಅಂತಾರಾಷ್ಟ್ರೀಯ ಎಐ ತಾಂತ್ರಿಕ ಪ್ರೇರಕ ಸ್ಪೀಕರ್ ಅರ್ಪಿತ್ ಯಾದವ್ ಅವರು ಕಾರ್ಯಾಗಾರಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಧನಜಯ್ ಡಿ.ಎಂ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಬದಲಾವಣೆ ಅನಿವಾರ್ಯ.ಆದರೆ ಅತಿಯಾದ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.ಎಐ ಮತ್ತು ಎಂ.ಎಲ್ ವಿಭಾಗದ ಎಚ್.ಒ.ಡಿ ಡಾ.ದಯಾನಂದ ಅವರು ಅಧ್ಯಕ್ಷತೆ ವಹಿಸಿದರು