ಜಿಎಂ ಹಾಲಮ್ಮ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೩: ನಗರದ  ಜಿಎಂಎಚ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಜ್ಞಾನದಿಂದ ವಿಜ್ಞಾನದ ಕಡೆಗೆ ಎಂಬ ಉಕ್ತಿಯಂತೆ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡಾ. ಪ್ರಸನ್ನ ಜಿ.ಡಿ  ಕಾರ್ಯಕ್ರಮಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವುದರ ಮೂಲಕ ಚಾಲನೆ ನೀಡುವುದರೊಂದಿಗೆ ಸಿ. ವಿ ರಾಮನ್ ರವರ ಜೀವನ ಚರಿತ್ರೆ ಮತ್ತು ಅವರು ನಡೆದು ಬಂದ ಸಾಧನೆಯ ಹಾದಿಯನ್ನು ತಿಳಿಸುವುದರೊಂದಿಗೆ ವಿಜ್ಞಾನದ ಕೊಡುಗೆಗಳಿಗೆ ಸಾಕ್ಷಿಯಾದ ವಿಜ್ಞಾನಿಗಳನ್ನು ಸ್ಮರಿಸುತ್ತಾ, ಬಾನ ಚಿತ್ತಾರದಲ್ಲಿ ಕಾಮನಬಿಲ್ಲಿನ ಬೆಳಕಿನ ಪ್ರತಿಫಲನದ ಬಿಂಬ, ಪ್ರತಿಬಿಂಬಗಳ ವಿವರಣೆಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.ಮತ್ತು ವಿದ್ಯಾರ್ಥಿಗಳ ಜೀವನದ ದಾರಿಯಲ್ಲಿ ಬಣ್ಣ ಬಣ್ಣಗಳ ಸಾಧನೆಯ ಬೆಳಕಿನ ಯಶಸ್ಸಿನ ಸಂಚಲನಗಳು ಮೂಡಿಸುವಂತೆ ಮಾಹಿತಿಯನ್ನು ಮನಮುಟ್ಟುವಂತೆ ಪ್ರೇರೇಪಿಸುತ್ತಾ, ಶ್ರೇಷ್ಠ ವಿಜ್ಞಾನಿಗಳಂತೆ ನೀವು ಸಹ ವಿಜ್ಞಾನಕ್ಕೆ ನಿಮ್ಮ ಕೊಡುಗೆಗಳು ಅಪಾರ ಪ್ರಮಾಣದಲ್ಲಿ ಹರಿದು ಬರಲಿ ಎಂದು ಶುಭ ಹಾರೈಸಿದರು. ಕಾಲೇಜಿನ ಸಹ ಆಡಳಿತ ಅಧಿಕಾರಿಗಳಾದ ಜಿ ಜೆ ಶಿವಕುಮಾರ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಓಂಕಾರಪ್ಪ ಎಚ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಲ್ಲಿರುವ ಜ್ಞಾನದೊಂದಿಗೆ ವಿಜ್ಞಾನ ಮತ್ತಷ್ಟು ಬೆಳೆಯಲಿ ಮುಂದಿನ ಪೀಳಿಗೆಗೆ ಇವರ ಸಾಧನೆಗಳು ಸ್ಪೂರ್ತಿದಾಯಕವಾಗಲಿ ಎಂದು ಶುಭ ಕೋರುತ್ತಾ ಅರ್ಥಪೂರ್ಣವಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.