ಜಿಎಂಐಟಿ:  ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೧೧: ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ 119 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹನಿವೆಲ್ ಕಂಪನಿ ಪ್ರಾಯೋಜಿತ 200 ಗಂಟೆಗಳ ಎ ಡಬ್ಲ್ಯೂ ಎಸ್  ಕೋರ್ಸ್ ಪೂರ್ಣಗೊಳಿಸಿ ಬಿ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹನಿವೆಲ್ ಕಂಪನಿ ಪ್ರಾಯೋಜಿತ ಮತ್ತು ಐಸಿಟಿ ಅಕಾಡೆಮಿ ಸಹಯೋಗದೊಂದಿಗೆ 200 ಗಂಟೆಗಳ, 15 ದಿನದ ತರಬೇತಿಯೊಂದಿಗೆ ಒಟ್ಟು 119 ವಿದ್ಯಾರ್ಥಿಗಳು ಅಮೆಜಾನ್ ವೆಬ್ ಸರ್ವಿಸಸ್ ತರಬೇತಿ ಬಿ ದರ್ಜಿಯೊಂದಿಗೆ ಪೂರ್ಣಗೊಳಿಸಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು. ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು  ಪ್ರಾಂಶುಪಾಲರ ಮೂಲಕ ವಿತರಿಸಲಾಯಿತು. ವಿತರಣಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂಜಯ್ ಪಾಂಡೆ ಎಂಬಿ, ಎ ಐ ಎಮ್ ಎಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ  ಕೀರ್ತಿಪ್ರಸಾದ್ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ  ತೇಜಸ್ವಿ ಕಟ್ಟಿಮನಿ ಟಿ ಆರ್ ಉಪಸ್ಥಿತರಿದ್ದರು.