ಜಿಎಂಐಟಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ತರಬೇತಿ

ದಾವಣಗೆರೆ.ನ.೩; ಜಿಟಿಟಿಸಿ ಹರಿಹರದಲ್ಲಿ ಹೊಸ ತಾಂತ್ರಿಕ ವ್ಯವಸ್ಥೆಗಳಿದ್ದು ಜಿಲ್ಲೆಯ ಮತ್ತು ರಾಜ್ಯದ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಜಿ.ಟಿ.ಟಿ.ಸಿ. ಪ್ರಾಂಶುಪಾಲ ಲಕ್ಷ್ಮಣ ನಾಯ್ಕ್ ಎಸ್ ಹೇಳಿದರು. ಅವರು ಜಿ.ಎಂ.ಐ.ಟಿ. ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ನಾಲ್ಕು ವಾರಗಳ ಇಂಟರ್ನ್ ಶಿಪ್ ಪ್ರಾರಂಭಿಕ ಭಾಷಣದಲ್ಲಿ ತಿಳಿಸಿದರು.

ಮಧ್ಯ ಕರ್ನಾಟಕದಲ್ಲಿ ಈ ಸಂಸ್ಥೆಯು ಹಲವಾರು ಸೌಲಭ್ಯಗಳನ್ನು ಹೊಂದಿದ್ದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ತಮ್ಮ ವಿದ್ಯಾಭ್ಯಾಸದ ನಂತರ ವಿವಿಧ ಅವಧಿಗಳ ತರಬೇತಿಗಳನ್ನು ಕೊಡಲಾಗುವುದು ಎಂದು ತಿಳಿಸಿದರು.ವಿದ್ಯಾರ್ಥಿಗಳು ಜಿ.ಟಿ.ಟಿ.ಸಿ.ಯಲ್ಲಿ ಸಿ.ಎನ್.ಸಿ. ಆಪರೇಷನ್ಸ್, ಪ್ರೋಗ್ರಾಮಿಂಗ್ ಮತ್ತು ನಾನ್ ಟ್ರಡಿಷನಲ್ ಮಶಿನಿಂಗ್ ಪ್ರೊಸೆಸ್ಸಸ್ ಮೇಲೆ ತರಬೇತಿ ಪಡೆಯುವರು ಎಂದು ಡಾ. ವೈ. ವಿಜಯಕುಮಾರ್, ಪ್ರಾಂಶುಪಾಲರು, ಜಿ.ಎಂ.ಐ.ಟಿ., ಹಾಗೂ ಡಾ. ಶ್ರೀನಿವಾಸ ಸಿ ವಿ, ವಿಭಾಗ ಮುಖ್ಯಸ್ಥರು, ಯಾಂತ್ರಿಕ ವಿಭಾಗ ಇವರು ತಿಳಿಸಿದರು. ದಿಲೀಪ್ ಕುಮಾರ್ ಎಸ್ ಜಿ, ಸಹಪ್ರಾಧ್ಯಾಪಕರು, ಯಾಂತ್ರಿಕ ವಿಭಾಗ, ಇವರು ಈ ಕಾರ್ಯಕ್ರಮವನ್ನು ಜಿ.ಟಿ.ಟಿ.ಸಿ. ಸಹಯೋಗದಲ್ಲಿ ಆಯೋಜಿಸಿದ್ದರು.
ಪೋಟೋ-೨