ಜಿಎಂಐಟಿ ಯಲ್ಲಿ ಮಲ್ಲಿಕಾ-22 ಕ್ರೀಡೆ- ಸಾಂಸ್ಕೃತಿ ಉತ್ಸವ

ದಾವಣಗೆರೆ. ಜು.೨೦; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಜು. 22 ಮತ್ತು 23  ರಂದು ಕಾಲೇಜಿನ ವಾರ್ಷಿಕ ಸಮಾರಂಭವಾದ ಮಲ್ಲಿಕಾ- ೨೨ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜು.೨೨ ರಂದು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು. ಚಟುವಟಿಕೆಗಳಲ್ಲಿ ಬಹುಮಾನವನ್ನು ವಿತರಿಸಲಾಗುವುದು, ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಸದಸ್ಯರಾದ  ಜಿ.ಎಸ್‌ ಅನಿತ್ ಕುಮಾರ್ ಕುಮಾರ್‌ ಉಪಸ್ಥಿತರಿರುವರು. ಜು.೨೩ ರಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಸಂಸದರಾದ ಡಾ. ಜಿ.ಎಂ ಸಿದ್ದೇಶ್ವರ್, ಹೆಸರಾಂತ ಸ್ಯಾಕ್ರೋಫೋನ್ ವಾದಕ ವಿದ್ವಾನ್‌ ಶ್ರೀಧರ್ ಸಾಗರ್, ಜಿ. ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಕುಮಾರಿ ವರ್ಣ ಚೌಹಾನ್, ಕುಮಾರಿ ನೇಹಾ ಶಾಸ್ತ್ರಿ ಮತ್ತು ಅಶ್ವಿನ್ ಶರ್ಮ ಭಾಗವಹಿಸಲಿದ್ದಾರೆ ಮತ್ತು ಕಾಲೇಜಿನ ಚೇರ್ಮನ್ ಜಿಎಂ ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನವನ್ನು ಜು.೨೩ ರಂದು  ಸಂಜೆಯ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು ಮತ್ತು 11 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಸ್ವೀಕರಿಸಲಿದ್ದಾರೆ ಹಾಗೂ ಪಿಹೆಚ್ ಡಿ ಪಡೆದ ಪ್ರಾಧ್ಯಾಪಕರು ಗಳಿಗೆ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ ಸುನಿಲ್ ಕುಮಾರ್ ಬಿ ಎಸ್ ತಿಳಿಸಿದರು.ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು, ಜಿ ಸರಿಗಮಪ ಸ್ಪರ್ಧಿಗಳಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಮತ್ತು ವಿದ್ಯಾನ್ ಶ್ರೀಧರ್ ಸಾಗರ್ ರವರಿಂದ ಲೈವ್ ಕನ್ಸರ್ಟ್  ಕಾರ್ಯಕ್ರಮಗಳು ನಡೆಯಲಿವೆ ಎಂದು ಇದೇವೇಳೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ.ಆರ್ ಉಪಸ್ಥಿತರಿದ್ದರು.