ಜಿಎಂಐಟಿ ಯಲ್ಲಿ ದಾಖಲೆಯ ಉದ್ಯೋಗ ನೇಮಕಾತಿ

ದಾವಣಗೆರೆ. ಜೂ.೪; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ವರ್ಷ ನಡೆದ ಕ್ಯಾಂಪಸ್ ಸಂದರ್ಶನಗಳಲ್ಲಿ ಇಂಜಿನಿಯರಿಂಗ್ ಎಲ್ಲಾ ವಿಭಾಗಗಳ ಕೊನೆಯ ವರ್ಷದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.ಇನ್ಫೋಸಿಸ್, ಟಿಸಿಎಸ್, ಸುಬೇಕ್ಸ್, ಆಕ್ಸೆಂಚರ್, ಎಸ್ಎಲ್ಕೆ ಸಾಫ್ಟ್ವೇರ್ ಸರ್ವೀಸಸ್, ಐಬಿಎಂ, ರೋಬೋಸಾಫ್ಟ್ ಟೆಕ್ನೋಲಜಿಸ್, ಐಸಿಐಸಿಐ ಬ್ಯಾಂಕ್, ಫೋಕಸ್ ಎಜುಮ್ಯಾಟಿಕ್ಸ   ನೈಡರ್ ಎಲೆಕ್ಟ್ರಿಕ್, ಎಚ್ ಸಿ ಎಲ್, ಮಹಿಂದ್ರ ಸಿಐಈ, ವಿ ಆರ್ ಕೆ ಡಿಸೈನ್, ಲ್ಯಾಂಡ್ ಫಾರ್ಮ್, ಒಮೆಗಾ ಹೆಲ್ತ್ ಕೇರ್, ನವ್ಯ ಬಯೋಲಾಜಿಕಲ್ಸ್, ವೇದಾಂತು ಹೀಗೆ ಒಟ್ಟು 54 ಪ್ರತಿಷ್ಠಿತ ಕಂಪನಿಗಳು ಈ ಶೈಕ್ಷಣಿಕ ವರ್ಷದಲ್ಲಿ ಸಂದರ್ಶನಗಳನ್ನು ನಡೆಸಿ 455 ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಂಡಿದ್ದಾರೆ.  
ಇದೇ ಮೊದಲ ಬಾರಿ ಇಷ್ಟೊಂದು ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. 
ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗುವುದರ ಮೂಲಕ ಮಧ್ಯ ಕರ್ನಾಟಕ ವಿಭಾಗದಲ್ಲಿ ದಾಖಲೆಯನ್ನು ಬರೆದಿರುತ್ತಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಎದುರಿಸಲು ಬೇಕಾದ ಎಲ್ಲಾ ತರಬೇತಿಯನ್ನು ಸಕಾಲಕ್ಕೆ ನೀಡುತ್ತಿದ್ದು, ಇದರಿಂದ ಸಂದರ್ಶನ ಪ್ರಕ್ರಿಯೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಮತ್ತು ಇನ್ನೂ ಹತ್ತು ಹಲವು ಕಂಪನಿಗಳ ಫಲಿತಾಂಶ ಬರಲಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್ ರವರು ತಿಳಿಸಿದ್ದಾರೆ.