ಜಿಎಂಐಟಿ ಪಾಲಿಟೆಕ್ನಿಕ್‌ನಲ್ಲಿ  ‘ಯತ್ನಿಕ್ ಡೇ’

 ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೧೬;  ನಗರದ  ಜಿ.ಎಂ.ಐ.ಟಿ ಪಾಲಿಟೆಕ್ನಿಕ್‌ನಲ್ಲಿ  ‘ಯತ್ನಿಕ್ ಡೇ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ಅಥಿತಿಗಳಾದ ಜಿ.ಎಂ.ಐ.ಪಿ.ಎಸ್.ಆರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬಿ ಬೋಳಕಟ್ಟಿ ಉದ್ಘಾಟಿಸಿ, ವಿದ್ಯಾರ್ಥಿಗಳು ನಮ್ಮ ನೆಲದ ಕಲೆ, ಪರಂಪರೆ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿ.ಎಂ. ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವಿಭಾಗದ ನಿರ್ಧೇಶಕರಾದ ಡಾ. ಬಸವರಾಜು ಪಿ ಎಸ್  ವಿದ್ಯಾರ್ಥಿಗಳು ಈ ರೀತಿಯ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭಾಕೌಶಲ್ಯಗಳನ್ನು ಅನಾವರಣಗೊಳಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಎಂ.ಐ.ಟಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಡಾ. ಬಿ. ಆರ್ ಶ್ರೀಧರ್‌ ಮಾತನಾಡಿ ವಿದ್ಯಾರ್ಥಿಗಳ ವಿವಿಧ ರೀತಿಯ ಕಲಾಪೋಷಾಕುಗಳನ್ನು ಪ್ರದರ್ಶಿಸಿಸುವ ಆಸಕ್ತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರು ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಆದ ಶ್ರೀ ಪ್ರವೀಣ್ ಕುಮಾರ್ ಎಂ, ರವರು ಮಾತನಾಡಿ ವಿವಿಧ ವಿಭಾಗದ ಥೀಮ್‌ಗಳು ಮತ್ತು ಪ್ರಶಸ್ತಿಗಳ ವಿವರವನ್ನ ತಿಳಿಸಿದರು. ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಡಾ. ಪೂಜಿತ ಶ್ರೀಧರ್, ಪ್ರಾಧ್ಯಾಪಕರು ಬಯೋ ಟೆಕ್ನಾಲಜಿ ವಿಭಾಗ ಮತ್ತು ಶ್ರೀ ಕಿರಣ್ ಕುಮಾರ್ ಸಹಾಯಕ ಪ್ರಾಧ್ಯಾಪಕರು ಸಿವಿಲ್ ಇಂಜಿನಿಯರಿAಗ್ ವಿಭಾಗ ತೀರ್ಪುಗಾರರಾಗಿದ್ದರು. ಜಿ.ಎಂ.ಐ.ಟಿ ಪಾಲಿಟೆಕ್ನಿಕ್‌ನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕುಮಾರಿ ನಂದಿನಿ ಸಿ ಜಿ ಮತ್ತು ಅನನ್ಯ ನಾಯಕ್ ಎರಡನೇ ಸೆಮಿಸ್ಟರ್ ಗಣಕ ಯಂತ್ರ ವಿಭಾಗ, ಪ್ರಾರ್ಥನೆಯನ್ನು ಕುಮಾರಿ ರಮ್ಯ ಹಾಗೂ ಸಂಗಡಿಗರು ಎರಡನೇ ಸೆಮಿಸ್ಟರ್ ವಿದ್ಯುನ್ಮಾನ ವಿಭಾಗ ಮತ್ತು ಅಥಿತಿಗಳಿಗೆ ಸ್ವಾಗತವನ್ನು ಯುವರಾಜ್ ಎಂ ಎಚ್ ಎರಡನೇ ಸೆಮಿಸ್ಟರ್ ಮೆಕ್ಯಾನಿಕಲ್ ವಿಭಾಗ ನೆರವೇರಿಸಿಕೊಟ್ಟರು.