ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ “ಯುಕ್ತಿ 2ಕೆ24” ನಲ್ಲಿ ಪ್ರಥಮ ಪ್ರಶಸ್ತಿ 

ಸಂಜೆವಾಣಿ ವಾರ್ತೆ

ದಾವಣಗೆರೆ. ಜ.೧೮; ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟçಮಟ್ಟದ ತಾಂತ್ರಿಕ ಮೇಳ “ ಯುಕ್ತಿ 2ಕೆ24 ” ರಲ್ಲಿ, ನಗರದ  ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಇರ್ನ್ಫ್ಮೆಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ದೆಯಲ್ಲಿ ಒಟ್ಟು ಹಲವು ಕಾಲೇಜಿನ 2700 ತಂಡಗಳ ಸ್ಪರ್ಧಿಗಳು ಭಾಗವಹಿಸಿದ್ದು, ಅದರಲ್ಲಿ ನಮ್ಮ ಕಾಲೇಜಿನ ಐಎಸ್‌ಇ ವಿಭಾಗದ ಇಬ್ಬರು ವಿದ್ಯಾರ್ಥಿ ಭಾಗವಹಿಸಿದ್ದು. ಇರ್ನ್ಫ್ಮೆಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿಯಾದ ಕು.ಸುಷ್ಮಾ ಬಿ.ಬಿ ಮತ್ತು ಕು. ಜ್ಯೋತಿ ಪೇಪರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದು ನಮ್ಮ ಕಾಲೇಜು ಹಾಗೂ ದಾವಣಗೆರೆ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಪ್ರೊಫೆಸರ್ ಇಮ್ರಾನ್ ಖಾನ್  ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.