ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ


ದಾವಣಗೆರೆ.ನ.೨೧; ರಾಜ್ಯಮಟ್ಟದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಆಯೋಜಿಸಿದ್ದ ಆನ್ಲೈನ್ ಸೆಮಿನಾರ್ ಹಾಗೂ ಎಕ್ಸಿಬಿಷನ್ ಸ್ಪರ್ಧೆಯಲ್ಲಿ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ೮ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ, ಕುಮಾರಿ ಭೂಮಿಕಾ ಎಂ, ಚೇತನ್ ಎನ್ ಆರ್, ರವಿಚಂದ್ರ ಎಂ ಎಚ್, ಜಿಲಾನಿ ಡಿ ರವರು ಮಂಡಿಸಿದ ಪ್ರಬಂಧಕ್ಕೆ ಪ್ರಶಸ್ತಿ ಲಭಿಸಿದೆ.