ಜಿಎಂಐಟಿ ಕಾಲೇಜಿಗೆ ಚಿನ್ನದ ಗರಿ

ದಾವಣಗೆರೆ.ಜ.೧೩; ಕೈಗಾರಿಕೋದ್ಯಮ ಸಂಪರ್ಕದೊಂದಿಗೆ ಬೆಳೆಯುತ್ತಿರುವ ತಾಂತ್ರಿಕ ಮಹಾವಿದ್ಯಾಲಯಗಳ ವಾರ್ಷಿಕ ಸರ್ವೆಯನ್ನು ಎ. ಐ. ಸಿ. ಟಿ. ಇ. ಹಾಗೂ ಸಿ. ಐ. ಐ. ಸಂಸ್ಥೆಗಳು ಜಂಟಿಯಾಗಿ ನಡೆಸುತ್ತವೆ. 2020ನೇ ಸಾಲಿನ ಸರ್ವೆಯಲ್ಲಿ ನಗರದ  ತಾಂತ್ರಿಕ ಮಹಾವಿದ್ಯಾಲಯವಾದ ಜಿಎಂಐಟಿ ಕಾಲೇಜಿನ ಸತತ ಸಾಧನೆಗಳನ್ನು ಪರಿಗಣಿಸಿ ಚಿನ್ನದ ಪ್ರಾಶಸ್ತ್ಯವನ್ನು ನೀಡಿ ಗೌರವಿಸಲಾಗಿದೆ. ಕಾಲೇಜು ಈಗಾಗಲೇ 75ಕ್ಕೂ ಹೆಚ್ಚು ಕೈಗಾರಿಕೋದ್ಯಮಗಳೊಂದಿಗೆ ಸಹಯೋಗ ಹೊಂದಿದ್ದು, ಹಲವಾರು ಸಂಸ್ಥೆಗಳೊಂದಿಗೆ , ಇಂಟರ್ನ್ಶಿಪ್, ಕನ್ಸಲ್ಟೆನ್ಸಿ, ಆರ್ ಅಂಡ್ ಡಿ ಚಟುವಟಿಗಳೊಂದಿಗೆ ತಾಂತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಹಾಗೂ 6 ವರ್ಷ ಸತತವಾಗಿ ಶೇಕಡಾ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಉದ್ಯೋಗ ದೊರೆತ್ತಿದ್ದು, ಕೆಲವರು ಉದ್ಯಮಶೀಲರಾಗಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿದ್ದಾರೆ.