ಜಿಎಂಐಟಿ ಉದ್ಯೋಗಾಧಿಕಾರಿಗೆ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ

ದಾವಣಗೆರೆ. ಸೆ.೧೫;  ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಮುಂಬೈ ಮೂಲದ ಸ್ಕಿಲ್ ಅಕಾಡೆಮಿ ಸಂಸ್ಥೆಯಿಂದ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ. ಈ ಸದಸ್ಯತ್ವದಿಂದ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ, ಹಲವು ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬಹುದಾಗಿದೆ ಇದಲ್ಲದೆ ವಿದ್ಯಾರ್ಥಿಗಳಿಗೆ ಕಂಪನಿಯ ಸಂದರ್ಶನ ಎದುರಿಸುವ ತಂತ್ರಗಳು ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಜ್ಞಾನ ನೀಡಬಹುದಾಗಿದೆ. ಸ್ಕಿಲ್ ಅಕಾಡೆಮಿ ಕ್ಯಾಂಪಸ್ ಪ್ರೋಗ್ರಾಮ್ ವತಿಯಿಂದ ಉದ್ಯಮ ಜಾಗೃತಿ ಅಧಿವೇಶನಗಳು, ಸರಿಯಾದ ವೃತ್ತಿ ನಿರ್ದೇಶನ, ಉದ್ಯೋಗ ತಯಾರಿ ಬೂಟ್ ಶಿಬಿರಗಳು ಮತ್ತು ಆನ್‌ಲೈನ್ ಆಪ್ಟಿಟ್ಯೂಡ್ ಅಭ್ಯಾಸಗಳನ್ನು  ಮಾಡಬಹುದಾಗಿದೆ ಎಂದು ತಿಳಿಸಿದರು.