ಜಿಎಂಐಟಿಯ ಇಸಿಇ ವಿಭಾಗದ ಫೋರಂ ಉದ್ಘಾಟನೆ


ದಾವಣಗೆರೆ. ನ.೧೦; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇಸಿಇ ವಿಭಾಗದ ಫೋರಂ ವಿಸೋನಿಕ್ಸ್ ನ ಉದ್ಘಾಟನೆ ಇಂದು ಇಸಿಇ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೂರನೇ ಮತ್ತು ಕೊನೆಯ ವರ್ಷದ ವಿದ್ಯಾರ್ಥಿಗಳು ಎರಡನೇ ವರ್ಷದ ವಿದ್ಯಾರ್ಥಿಗಳನ್ನು ವಿಭಾಗಕ್ಕೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳ ಮೂಲಕ ಗಮನಸೆಳೆದರು. ಹಲವು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳ ಮೂಲಕ ಕಂಗೊಳಿಸುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್  ಮಾತನಾಡಿ, ಈ 
ಫೋರಂ  ಅಡಿಯಲ್ಲಿ ಆಯೋಜಿಸುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯತೆ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು. ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ರವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಾಬಲ್ಯ ಗೊಳ್ಳಬೇಕು ಮತ್ತು ಕಂಪನಿಗಳ ಸಂದರ್ಶನಕ್ಕೆ ಬೇಕಾದ ನೈಪುಣ್ಯತೆಯನ್ನು ಈಗಿನಿಂದಲೇ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ವಿಭಾಗದ ವಿದ್ಯಾರ್ಥಿಗಳು ಈಗಾಗಲೇ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ನಿಪುಣತೆಯನ್ನು ತೋರಿದ್ದಾರೆ, ಮುಂದೆಯೂ ಇದೇ ರೀತಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ವಿಭಾಗದ ಮುಖ್ಯಸ್ಥರಾದ ಡಾ ಪ್ರವೀಣ್ ರವರು ಮಾತನಾಡಿ, ಪಠ್ಯೇತರ ಚಟುವಟಿಕೆಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ಸಿದ್ಧಪಡಿಸಿದ್ದು, ಇದರ ಪ್ರಕಾರ ವಿದ್ಯಾರ್ಥಿಗಳು ಭಾಗವಹಿಸಬೇಕು ಮತ್ತು ಹೊಸ ಆವಿಷ್ಕಾರಗಳ ಮೂಲಕ ನಿಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಮತ್ತು ವಿಭಾಗಕ್ಕೆ ಹೆಸರನ್ನು ತಂದುಕೊಡಬೇಕೆಂದು ತಿಳಿಹೇಳಿದರು. ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರುಗಳು, ಫೋರಂನ ಸಂಯೋಜಕರಾದ ಶ್ರೀ ವಿಕಾಸ್ ಸಿ ವೈ, ಅಕ್ಷತಾ ಚೌಹಾನ್, ಶರಣ ಬಸವೇಶ್ವರ ಹೆಚ್ ಬಿ, ವಿದ್ಯಾರ್ಥಿ ಫೋರಂ ಪ್ರತಿನಿಧಿಗಳಾದ ನೂತನ ಎಂ, ನಟರಾಜ್ ಎ ವಿ, ನಿತಿನ್ ಪಿ, ಮುಂತಾದವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.