ಜಿಎಂಐಟಿಯಲ್ಲಿ ಮಹಿಳಾ ಕೋಶ ಉದ್ಘಾಟನೆ

ದಾವಣಗೆರೆ.ನ.೧೩;  ನಗರದ ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಸಭಾಂಗಣದಲ್ಲಿ  ಮಹಿಳಾ ಕೋಶ ಉದ್ಘಾಟನೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಪ್ರಾಧ್ಯಾಪಕರು, ವಿದ್ಯಾರ್ಥಿಕ್ಷೇಮಪಾಲನ ಮುಖ್ಯಸ್ಥರು ಮತ್ತು ವಿ ಟಿ ಯು ಮಹಿಳಾ ಕೋಶ ಸದಸ್ಯರು ಯು.ಬಿ.ಡಿ.ಟಿ.ಸಿ.ಇಯ ಡಾ.ಎಚ್ ಈರಮ್ಮ  ಆಗಮಿಸಿ ಹೆಣ್ಣು ಮಕ್ಕಳು ಪಠ್ಯೇತರಚಟುವಟಿಕೆಯಲ್ಲದೆ ಎಲ್ಲಾಕ್ಷೇತ್ರದಲ್ಲೂ ಮುಂದುವರೆಯಬೇಕು ಸದಾಎಚ್ಚರದ ಸ್ಥಿತಿಯಲ್ಲಿದ್ದು, ಕಲಿತ ವಿದ್ಯೆಯಿಂದ ಸಬಲಳಾಗಿರಬೇಕೆಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ ವಿಜಯಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವಿದ್ಯಾರ್ಥಿಗಳಾದ ಕುಮಾರಿ ಅನುಶ್ರಿ ಮತ್ತು ಕುಮಾರಿ ಕಾವ್ಯ ಹೆಗ್ಗಡೆ ಪ್ರಾರ್ಥಿಸಿದರು, ಕುಮಾರಿ ಜನನಿ ಸ್ವಾಗತಿಸಿದರು, ಕುಮಾರಿ ಅನುಷ ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ ಮೆಹಕ್ ನಿರೂಪಿಸಿದರು, ಕುಮಾರಿ ಪೂಜ ಎಚ್ ವಂದಿಸಿದರು.ಮಹಿಳಾ ಕೋಶ ಅಧ್ಯಕ್ಷಕಿಯಾದ ಡಾ. ಲತಾ, ಮುಖ್ಯ ಸಂಯೋಜಕರಾದ ಶ್ರೀಮತಿ ಮಂಜುಳಾ, ಮಹಿಳಾ ಸಬಲೀಕರಣದ ನಿರ್ದೇಶಕಿ ಶ್ರೀಮತಿ ವೆಂಕಟಸುಮನ, ಕಾಲೇಜಿನ ಭೋದಕ ಮತ್ತು ಭೋದಕೇತರ ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು