ಜಿಎಂಐಟಿಯಲ್ಲಿ “ಕಾರ್ಯಾಗಾರ

 ದಾವಣಗೆರೆ.ಏ.೧೯; ನಗರದ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಾವಣಗೆರೆ ಪ್ರಾದೇಶಿಕ ಕೇಂದ್ರದ ಸಂಯೋಗದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಪ್ರೋಗ್ರಾಮ್ ಗೆ ಚಾಲನೆ ನೀಡಲಾಯಿತು.ಕಾಲೇಜಿನ ಕಂಪ್ಯೂಟರ್ ಸೆಂಟರ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ನಿದೇರ್ಶಕರಾದ ಡಾ. ಸುಧಾಕರ  ಹೊಸಹಳ್ಳಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ  ಮುಂದಿನ ದಿನಗಳಲ್ಲಿ  ತಂತ್ರಜ್ಞಾನದ ಅನೇಕ ಉಪಯೋಗಗಳನ್ನು ನಾವು ಕಾಣಬಹುದು ಎಂದು ಹೇಳಿದರು ಮತ್ತು ನಂತರ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿರುವ ಎಲ್ಲರಿಗೂ ಶುಭ ಕೋರಿದರು. ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಕೌಶಲ್ಯಾಭಿವೃಧ್ಧಿ ತರಬೇತಿ ವಿಭಾಗದ ಸಂಯೋಜನಾಧಿಕಾರಿ  ಲೋಕಶ್ ಜಿ.ಎಸ್ ಮತ್ತು ರವಿ ಉಪಸ್ಥಿತರಿದ್ದರು.
ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಐಎಸ್‌ಇ ವಿಭಾಗದ ಮುಖ್ಯಸ್ಥರು ಹಾಗು ಕಾರ್ಯಕ್ರಮದ ಸಂಚಾಲಕರಾದ ಡಾ. ಸುನಿಲ್ ಕುಮಾರ್ .ಬಿ.ಎಸ್.ರವರು ಮಾತನಾಡಿ ಈ ಕಾರ್ಯಾಗಾರದ ಮೂಲ ಉದ್ದೇಶವನ್ನು ತಿಳಿಸಿದರು. ಹಾಗೂ ಮುಕ್ತ ವಿಶ್ವವಿದ್ಯಾಲಯದ  ವಿದ್ಯಾರ್ಥಿಗಳಿಗೆ ಜ್ಞಾನ ತುಂಬ ಬೇಕೆಂದು ಕೋರಿಕೊಂಡರು.  ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಢಳಿತಾಧಿಕಾರಿಗಳಾದ  ವೈ.ಯು. ಸುಭಾಶ್‌ಚಂದ್ರ, ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.