
ದಾವಣಗೆರೆ.ಮಾ.೯; ನಗರದ ಜಿ.ಎಂ ತಾಂತ್ರಿಕ ಮಹಾವಿಧ್ಯಾಲಯದ ಜಿ ಎಂ ಹಾಲಮ್ಮ ಸಭಾಂಗಣದಲ್ಲಿ “ಅಂತರಾಷ್ಟ್ರೀ ಮಹಿಳಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಾಧ್ಯಪಕಿಯರು ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.ಮಹಿಳಾ ಸಬಲೀಕರಣ ಮಹಿಳೆಯರ ಹಕ್ಕುಗಳ ರಕ್ಷಣೆ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವ ಉದ್ದೇಶದಿಂದ ಪ್ರತಿ ವರ್ಷವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುವುದು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕಿರುವಾಡಿ ಗಿರಿಜಮ್ಮ, ಗೌರವಾಧ್ಯಕ್ಷರು , ಹಿಮೋಫಿಲೀಯಾ ಸೊಸೈಟಿ, ದಾವಣಗೆರೆ ಇವರು ಆಗಮಿಸಿ ಸಮಾಜ ಸೇವೆಯ ಬಗ್ಗೆ ಅರಿವು ಮೂಡಿಸಿ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಪ್ರೇರೇಪಿಸಿದರು ಹಾಗೂ ಅಡಿಗೆ ಮನೆಯಿಂದ ಆಕಾಶದವರೆಗೂ ಮಹಿಳೆಯರ ಸಾಧನೆಯು ಸವಿಸ್ತಾರವಾಗಿ ಹಬ್ಬಿಕೊಂಡಿದೆ ಹುಟ್ಟಿನಿಂದ ತಂದೆ ತಾಯಿಗೆ ಮುದ್ದಿನ ಮಗಳಾಗಿ, ಸಹೋದರ ಮತ್ತು ಸಹೋದರಿಯರಿಗೆ ಮಾರ್ಗದರ್ಶಕಿಯಾಗಿ, ಪತಿಗೆ ಸದ್ಗೃಹಿಣಿಯಾಗಿ, ಮಕ್ಕಳಿಗೆ ಮಾತೃತ್ವದ ಸಿಹಿಯ ಉಣಿಸಿ, ಇತರ ಕಾರ್ಯಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿ ಎಲ್ಲಾ ಜವಬ್ದಾರಿಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕೌಶಲ್ಯವನ್ನು ಹೊಂದಿರಬೇಕು ಮತ್ತು ಹೆಣ್ಣುಮಕ್ಕಳು ಸದಾ ಎಚ್ಚರದ ಸ್ಥಿತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯ ಸಮಯವನ್ನು ವ್ಯಯಿಸಬಾರದು, ಹೆಣ್ಣು ವಿದ್ಯೆ ಕಲಿತು ಸಬಲಳಾಗಿರಬೇಕೆಂದು ಸಲಹೆ ನೀಡಿದರು.