ಜಿಂದಾಲ್ ಗೆ ಜಮೀನು ಪರಭಾರೆ ಈಗ ಶಾಸಕ ತುಕರಾಂ ಸರದಿ

ಬಳ್ಳಾರಿ ಜೂ 05 : ಜಿಂದಾಲ್ ಸಂಸ್ಥೆಗೆ ಜಮೀನುಬಪರಭಾರೆ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದೆಂದು ಸಂಡೂರು ಶಾಸಕ ಈ ತುಕರಾಂ ಹೇಳಿದ್ದಾರೆ.
ಸಂಡೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು.‌ ಸರ್ಕಾರ ತಾನು ಜಿಂದಾಲ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದಂತೆ ಪರಭಾರೆ ಮಾಡಬೇಕಿದೆ. ಇಲ್ಲದಿದ್ದರೆ ಕಾನೂನಿನ ವಿರುದ್ಧ ನಡೆದುಕೊಂಡಂತೆ ಆಗಲಿದೆಂದರು.
ಭೂಮಿ ಪರಭಾರೆ ಕುರಿತಂತೆ ಈಗಾಗಲೇ ಸಮಗ್ರ ವರದಿ ತಯಾರಿ‌ ಮಾಡಿಕೊಂಡಿದ್ದೇನೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆ ಯಿಂದ ಬಂದ ಬಳಿಕ ಈ ವಿಷಯ ಅವರ ಬಳಿ ಚರ್ಚೆ ಮಾಡ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು, ಅಂದಿನ‌ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇದಕ್ಕೊಂದು ಸಮಿತಿ ಮಾಡಿದ್ದರು.‌ ಸಮಿತಿ ವರದಿ ಸಲ್ಲಿಸೋ ಮುನ್ನವೇ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದರು.
ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದ ತುಕಾರಾಂ ಅವರು. ಎಲ್ಲರೂ ಅಭಿವೃದ್ಧಿ ಪರವಾಗಿ ಕೆಲಸ ಮಾಡಬೇಕು. 1995ರಿಂದಲೂ ಜಮೀನನ್ನು ಲೀಜ್ ಕಂ ಸೇಲ್ ಮಾದರಿಯಲ್ಲಿ ನೀಡಲಾಗಿದೆ. ಆದರೆ ಈಗ ಯಾಕೆ ವಿರೋಧ.‌
ಸಚಿವ ಆನಂದ ಸಿಂಗ್ ಅವರ ಮೈನಿಂಗ್ ಮಾಡಿದ್ದಾರೆ. ಅವರು ಕೂಡ ಅರ್ಥ ಮಾಡಿಕೊಳ್ಳಬೇಕು. ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ತುಕಾರಾಂ ಹೇಳಿದರು.
ಈ ವರೆಗೆ ಅನೇಕ ಬಾರಿ ಜಿಂದಾಲ್ ಗೆ ಅಕ್ರಮ ಅದಿರು ಸಾಗಾಣೆ ಬಗ್ಗೆ, ಸ್ಥಳೀಯರಿಗೆ ಉದ್ಯೋಗ ನೀಡಿಕೆಯಲ್ಲಿನ ಅನ್ಯಾಯದ ಬಗ್ಗೆ ಅನೇಕ‌ ಬಾರಿ ಆಕ್ಷೇಪ ಎತ್ತಿದ್ದ ಶಾಸಕ ತುಕರಾಂ ಈಗ ಜಿಂದಾಲ್ ಪರ ಬ್ಯಾಟಿಂಗ್ ಬೀಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕ್ಷೇತ್ರದ ಜನರು ಇದನ್ನೆಲ್ಲ ಮೌನದಿಂದಲೇ ನೋಡುತ್ತಿದ್ದಾರೆ.