ಜಿಂದಾಲ್ ಗೆ ಜಮೀನು ಪರಬಾರೆ: ಮುಂದಿನ ಸಂಪುಟದಲ್ಲಿ ವಿರೋಧಿಸುವೆ: ಆನಂದ್ ಸಿಂಗ್

ಬಳ್ಳಾರಿ ಏ 30 : ಜಿಲ್ಲೆಯ ತೋರಣಗಲ್ಲಿನಲ್ಲಿನ ಸರ್ಕಾರಿ ಜಮೀನನ್ನು ಜಿಮನದಾಲ್ ಸಂಸ್ಥೆಗೆ ಪರಭಾರೆ ‌ಮಾಡುವುದನ್ನು ಈ‌ಹಿಂದೆ ವಿರೋಧಿಸಿದ್ದೆ. ಈಗಲೂ ವಿರೋಧಿಸುವೆ. ಸಂಪುಟದ ನಿರ್ಧಾರದ ಬಗ್ಗೆ ನನಗೆ ಅಸಮಾಧಾನವಿದ್ದು ಮುಂದಿನ‌ ಸಂಪುಟ ಸಭೆಯಲ್ಲಿ ಅದನ್ನು ವಿರೋಧಿಸುವೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು.

ಜಿಂದಾಲ್ ಸಂಸ್ಥೆಗೆ 3665 ಎಕರೆ ಭೂಮಿ ಪರಾಭಾರೆ ವಿಚಾರದಲ್ಲಿ ಈಗಲೂ ನನ್ನ ನಿರ್ಧಾರಕ್ಕೆ ಬದ್ಧ. ಮೂರುವರ ಸಾವಿರ ಕೋಟಿ ಬೆಲೆ ಬಾಳೋ ಭೂಮಿಯನ್ನು ಕೇವಲ 50 -60 ಸಾವಿರ ಕೋಟಿ ಹಣಕ್ಕೆ ಮಾರಾಟ ಮಾಡಲಾಗಿದೆ. ಇದು ನನಗಷ್ಟೇ ಅಲ್ಲ ಯಾರಿಗೂ ಸರಿ ಅನ್ನಿಸೋದಿಲ್ಲ ಎಂದರು.

ನನ್ನ ನಿಲುವಿನ‌ವಬಗ್ಗೆ ನಾನು ಸಿಎಂ ಯಡಿಯೂರಪ್ಪ ಅವರಿಗೆ ಹೇಳುವೆ. ಅವರು ಏನೂ ಹೇಳ್ತಾರೋ ನೋಡಿ ನಾನು ನನ್ನ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದರು.

ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡೋದು ಬೇಡ ಕಂಪನಿ ಇರೋವವರೆಗೂ ನಡೆಸಲಿ ನಂತರ ಭೂಮಿ ಸರ್ಕಾರಕ್ಕೆ ವಾಪಸ್ ನೀಡಲಿ ಎಂದರು.

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ತಾತ್ಕಾಲಿಕ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಿದೆ. ಜಿಂದಾಲ್ ಸಹಯೋಗದಲ್ಲಿ ಸಧ್ಯದಲ್ಲಿ ಒಂದು ಸಾವಿರ ಆಕ್ಸಿಜನ್ ಸಮೇತ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯನ್ನು ತೋರಣಗಲ್ಲಿನಲ್ಲಿ ಆರಂಭಿಸಲಿದೆ ಎಂದು ತಿಳಿಸಿದರು.